ಶಿರಸಿ: ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ ತಂಡದ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಿರಸಿ ಹೊಸಮಾರುಕಟ್ಟೆ ಪೊಲೀಸರು ಎಂಟು ಜನರನ್ನು ಬಂಧಿಸಿ ನಗದು ಹಣವನ್ನು, ಮೊಬೈಲ್ ಗಳನ್ನು ವಶಪಡಿಸಿಕೊಂಡ ಘಟನೆ ನಗರದ ಕೆ.ಎಚ್.ಬಿ ಕಾಲೋನಿ ನಡೆದಿದೆ.
ನಗರದ ಕೆ.ಎಚ್.ಬಿ ಕಾಲೋನಿ 4 ನೇ ಕ್ರಾಸ್‌ನಲ್ಲಿರುವ ಬುಡೇನ್ ಸಾಬ್ ಇವರ ಮನೆಯ ಒಳಗೆ ಅಂದರ್ ಬಾಹರ್ ಜುಗರಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಬುಡೇನ್ ಸಾಬ್ ಗರೀಬ್ ಸಾಬ್ ಗಾಣಗ , ಗೌಸ್ ಮೊಹಿದ್ದಿನ್ ಮಹಮ್ಮದ್ ಸ್ಮಾಯಿಲ್ ಕೆಂಚರಗಟ್ಟಿ , ಮಹಮ್ಮದ್ ಕಾಸಿಮ್ ನೂರಅಹಮ್ಮದ್ ತಿಮ್ಮಾಪುರ, ಶಾಬಾಜ್ ರೆಹಮುತ್ತಲ್ಲಾ ಶೇಖ್ , ಜಾಫರ ಅಬ್ದುಲ್ ಸತ್ತಾರ ಶೇಖ್ , ಜಾವೀದ ಇಸಾಕ ಶೇಖ್, ಮಾರುತಿ ರಾಮ ನಾಯ್ಕ , ಸಲ್ಮಾನ್ ಇನಾಯತ್ ಶೇಖ್ ಎಂಬುವವರನ್ನು ಬಂಧಿಸಲಾಗಿದೆ.