ಅಂಕೋಲಾ : ವಿಜಯಪುರ ಜಿಲ್ಲೆಯ ಲೋಕಾಯುಕ್ತ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ ಬಿ. ನಾಯಕ (58) ಅವರು ತಮ್ಮ ಸೇವೆಯ ಅವಧಿಯಲ್ಲಿಯೇ ಹೃದಯಾಘಾತದಿಂದ ನಿಧನರಾದರು. ಮೃತರ ಪಾರ್ಥಿವ ಶರೀರವನ್ನು ವಂದಿಗೆಯಲ್ಲಿರುವ ಅವರ ಸ್ವಗ್ರಹಕ್ಕೆ ತಂದು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

RELATED ARTICLES  ತಾಲೂಕಾ ಮಟ್ಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಎಸ್.ಡಿ.ಎಮ್. ಕಾಲೇಜು ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಸರಕಾರಿ ಪೊಲೀಸ್ ಗೌರವವನ್ನು ಸೂಚಿಸಿದ ಪೊಲೀಸ್ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಉ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ವಿಜಯಪುರದ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣನವರ, ಕಾರವಾರದ ಲೋಕಾಯುಕ್ತ ಎಸ್ಪಿ ಕುಮಾರಚಂದ್ರ, ಕಾರವಾರ ವಲಯದ ಡಿವೈಎಸ್ಪಿ ವಾಲೆಂಟೈನ್ ಡಿಸೋಜಾ, ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಸಂತೋಷ ಶೆಟ್ಟಿ, ಪಿಸೈ ಉದ್ದಪ್ಪ ಸೇರಿದಂತೆ
ಮೊದಲಾದವರು ಉಪಸ್ಥಿತರಿದ್ದು ಸರಕಾರಿ ಗೌರವ ಸಲ್ಲಿಸಿದರು.

RELATED ARTICLES  ಇದೊಂದು ಖುಷಿ ಸುದ್ದಿ…. ಚಂದ್ರನ ಮೇಲೂ ನೆಟವರ್ಕ್ ಟವರ್ ನಿರ್ಮಾಣ.!