ಭಟ್ಕಳ: ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ವಾಕೋ ಕರ್ನಾಟಕ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಟ್ಕಳದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವಿದ್ಯಾರ್ಥಿಗಳು ಕಿಕ್
ಬಾಕ್ಸಿಂಗ್ ನ ಮೂರನೆಯ ರಾಜ್ಯ ಮಟ್ಟದ ಜೂನಿಯರ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಐದು ಚಿನ್ನದ ಪದಕ,ಮೂರು ಬೆಳ್ಳಿಯ ಪದಕ ಎರಡು ಕಂಚಿನ ಪದಕಗಳಿಸಿದ್ದಾರೆ.

ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಜಾರ್ಖಂಡ್ ನ ರಾಂಚಿಯಲ್ಲಿ ನಡೆಯುವ ನಡೆಯುವ ರಾಷ್ಟ್ರಮಟ್ಟದ ಜೂನಿಯರ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ. 7-9 ವರ್ಷದ ವಿಭಾಗದಲ್ಲಿ ಧನ್ವಿತಾ ವಾಸು ಮೊಗೇರ, 19 ಕೆಜಿ ವಿಭಾಗದ ಪಾಯಿಂಟ್ ಫೈಟಿಂಗ್ ನಲ್ಲಿ ಚಿನ್ನದ ಪದಕ ಹಾಗೂ ಮ್ಯೂಸಿಕಲ್ ಫಾರ್ಮ್ ನಲ್ಲಿ ಬೆಳ್ಳಿಯ ಪದಕ, ಆಧ್ಯಾ ರವಿ ನಾಯ್ಕ 22ಕೆಜಿ ವಿಭಾಗದ ಪಾಯಿಂಟ್ ಫೈಟಿಂಗ್ ನಲ್ಲಿ ಚಿನ್ನದ ಪದಕ ಹಾಗೂ ಕ್ರಿಯೇಟಿವ್ ಫಾರ್ಮ್ ನಲ್ಲಿ ಬೆಳ್ಳಿಯ ಪದಕ.10-12 ವರ್ಷದ ವಿಭಾಗದಲ್ಲಿ ಜೀವಲ್ ಭಾಸ್ಕರ ಮೊಗೇರ 28ಕೆಜಿ ವಿಭಾಗದ ಪಾಯಿಂಟ್ ಫೈಟ್ನಲ್ಲಿ ಬೆಳ್ಳಿಯ ಪದಕ ಹಾಗೂ ಮ್ಯೂಸಿಕಲ್ ಫಾರ್ಮ್ ನಲ್ಲಿ ಐದನೇ ಸ್ಥಾನ ಪಡೆದಿದ್ದಾರೆ.

RELATED ARTICLES  ಮಹಿಳೆ ಮತ್ತು ಮಕ್ಕಳ ಗ್ರಾಮ ಸಭೆ.

ಚಿರಾಗ್ ಮಹೇಶ ನಾಯ್ಕ 30ಕೆಜಿ ವಿಭಾಗದ ಪಾಯಿಂಟ್ ಫೈಟ್ ನಲ್ಲಿ ಕಂಚಿನ ಪದಕ,ಹಾಗೂ ಕ್ರಿಯೇಟಿವ್ ಫಾರ್ಮ್ ನಲ್ಲಿ ನಾಲ್ಕನೇ ಸ್ಥಾನ, ಜುರಾರ ಲೌನಾ 42ಕೆಜಿ ಪಾಯಿಂಟ್ ಫೈಟ್ ನಲ್ಲಿ ಬೆಳ್ಳಿಯ ಪದಕ, ಮೊಹಮ್ಮದ್ ದಾಮಿಲ್ 47ಕೆಜಿ ಪಾಯಿಂಟ್ ಫೈಟ್ ನಲ್ಲಿ ಚಿನ್ನದ ಪದಕ ಪಡೆದು
ಭಟ್ಕಳಕ್ಕೆ ಕೀರ್ತಿ ತಂದಿದ್ದಾರೆ.

RELATED ARTICLES  ಇಂದಿನ(ದಿ-09/11/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.