ಕುಮಟಾ: ಇಲ್ಲಿಯ ಗಂಧರ್ವ ಕಲಾ ಕೇಂದ್ರದ ವಾರ್ಷಿಕೋತ್ಸವ ಜು. 23ರಂದು ಬೆಳಗ್ಗೆ 9 ಗಂಟೆಯಿಂದ ಪಟ್ಟಣದ ಹವ್ಯಕ ಸಭಾಮಂಟಪದಲ್ಲಿ ನಡೆಯಲಿದೆ. ದಿನವಿಡೀ ಹಿರಿಯ, ಕಿರಿಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಅರೇಅಂಗಡಿಯ ಎಸ್ ಕೆಪಿ ಕಾಲೇಜಿನ ನಿವೃತ್ತ ಉಪನ್ಯಾಸಕ ಐ.ಎಸ್. ಹೆಗಡೆ, ಕುಮಟಾ ಹನುಮಂತ ಬೆಣ್ಣೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಆನಂದ ನಾಯ್ಕ ಪಾಲ್ಗೊಳ್ಳುವರು. ಗಂಧರ್ವ ಕಲಾ ಕೇಂದ್ರದ ಅಧ್ಯಕ್ಷ ಡಾ. ಅನಿಲ್ ಹೆಗಡೆ ಅಧ್ಯಕ್ಷತೆ ವಹಿಸುವರು. ಕಲಾವಿದರಾದ ಚಿನ್ಮಯ ಭಟ್ಟ ಗುಡ್ಡೇಬಾಳ, ಭರತ ಹೆಗಡೆ ಕವಲಕ್ಕಿ, ಅಜೇಯ ಹೆಗಡೆ ಶಿರಸಿ ಪಾಲ್ಗೊಳ್ಳುವರು ಎಂದು ಸಂಘಟಕರು ತಿಳಿಸಿದ್ದಾರೆ.

RELATED ARTICLES  ಜುಲೈ 15 ರ ವರೆಗೆ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ