ಮುಂಡಗೋಡ: ತಾಲೂಕಿನ ಮರಗಡಿ ಗೌಳಿದೊಡ್ಡಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿದ್ದು ತೀವ್ರ ರಕ್ತಸ್ರಾವದಿಂದ ರೈತ ಮೃತಪಟ್ಟ ಘಟನೆ ಗುರುವಾರ ನಡೆದಿದೆ.‌ ಜಿಮ್ಮು ವಾಗು ತೋರವತ್ (58) ಮೃತಪಟ್ಟ ರೈತನಾಗಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಕರಡಿ ದಾಳಿ ನಡೆಸಿದೆ. ಇದರಿಂದ ರೈತನ ತಲೆ,ಕುತ್ತಿಗೆ,ಬಲಕಾಲು ಮತ್ತು ಬಲಕೈಗೆ ತೀವ್ರ ಗಾಯವಾಗಿದ್ದು, ತೀವ್ರ ರಕ್ತಸ್ರಾವದಿಂದ ರೈತ ಮೃತಪಟ್ಟಿದ್ದಾನೆ ಎನ್ನಲಾಗಿದೆ.

RELATED ARTICLES  ಮರಣ ಕಾಲದಲ್ಲಿ ಯಾವ ಯೋಚನೆಗಳು ಬರ ಬಹುದು?