ಶಿರಸಿ: ತಾಲೂಕಿನಲ್ಲೆಡೆ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೆಲವೆಡೆ ಅನಾಹುತಗಳು ನಡೆದಿಯುತ್ತಿದೆ. ಅಂತೆಯೇ ಹುಣಸೆಕೊಪ್ಪ ಪಂಚಾಯತ ವ್ಯಾಪ್ತಿಯ ಹನುಮಂತಿಯಲ್ಲಿ ಪ್ರಶಾಂತ ಗಣಪತಿ ಗೌಡ ಎಂಬುವವರ ಮನೆಯ ಮೇಲೆ ಭಾರೀ ಗಾತ್ರದ ಮಾವಿನ ಮರವೊಂದು ಮುರಿದು ಬಿದ್ದಿದ್ದು, ಮನೆ ಬಹುತೇಕ ಜಖಂಗೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.

RELATED ARTICLES  ಶಾಲೆ ಗೋಡೆ ಕುಸಿತ : ತಪ್ಪಿದ ಭಾರೀ ಅನಾಹುತ

ಮನೆಯ ಹಿಂಬದಿಯಲ್ಲಿದ್ದ ಮಾವಿನಮರ ಗಾಳಿ-ಮಳೆಯ ಕಾರಣದಿಂದಾಗಿ ತುಂಡಾಗಿ ಬಿದ್ದಿದ್ದು ಮನೆಯ ಬಹುತೇಕ ಭಾಗ ಕುಸಿದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಈ ವೇಳೆ ಮನೆಯೊಳಗೆ ಮಲಗಿದ್ದ ಮನೆಯ ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಶಿರಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

RELATED ARTICLES  ಶ್ರೀ ಗಣೇಶ ಪಂಚರತ್ನ ಸ್ತೋತ್ರ

ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪಂಚಾಯತ ಪಿಡಿಒ, ಸದಸ್ಯರುಗಳು ಭೇಟಿ ನೀಡಿದ್ದು, ಸುತ್ತಮುತ್ತಲಿನ ಊರವರ ಸಹಾಯದಿಂದ ಮರವನ್ನು ತೆರವುಗೊಳಿಸಲಾಗಿದೆ.