ಯಲ್ಲಾಪುರ: ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಾತೊಡ್ಡಿ ಜಲಪಾತ ತುಂಬಿ ಹರಿಯುತ್ತಿದೆ. ನೀರು ರಭಸದಿಂದ ಹರಿಯುತ್ತಿದ್ದು, ಪ್ರವಾಸಿಗರು ನೀರಿಗಿಳಿಯುವ ಸಾಹಸಕ್ಕೆ ಕೈ ಹಾಕುತ್ತಾರೆ. ಅಲ್ಲದೇ ಜಲಪಾತಕ್ಕೆ ಹೋಗುವ ದಾರಿಯ ಪಕ್ಕದಲ್ಲಿರುವ ಗುಡ್ಡ ಕುಸಿಯುವ ಭೀತಿಯಿಂದಾಗಿ ಹಾಗೂ ಜಲಪಾತಕ್ಕೆ ಹೋಗುವ ರಸ್ತೆ ಬದಿಯ ಮರಗಳು ಉರುಳಿ ಬೀಳುತ್ತಿರುವುದರಿಂದ ಮುನ್ನಚ್ಚರಿಕೆ ಕ್ರಮವಾಗಿ ಪ್ರವಾಸಿಗರು ಬರದಂತೆ ನಿರ್ಬಂಧಿಸಲಾಗಿದೆ. ಈ ಕುರಿತು ಕುಂಬ್ರಾಳ ಕಂಚನಗದ್ದೆ ಗ್ರಾಮ ಅರಣ್ಯ ಸಮಿತಿ ಆದೇಶಿಸಿರುವುದಾಗಿ ಸಮಿತಿ ಅಧ್ಯಕ್ಷ ನಾರಾಯಣ ಭಟ್ಟ ಕಂಚನಗದ್ದೆ ತಿಳಿಸಿದರು.

RELATED ARTICLES  ಮನನೊಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ನಾಳೆ ಶಾಲೆಗೆ ರಜೆ.
ಯಲ್ಲಾಪುರದಲ್ಲಿ ತೀವ್ರ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣದಿಂದಾಗಿ ಶಾಲಾ ವಿದ್ಯಾರ್ಥಿಗಳ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸುವಂತೆ ಸೂಚಿಸಿ, ದಿನಾಂಕ 24/07/2023 ರಜೆ ಘೋಷಣೆಯಾಗಿದೆ ಎಂದು ವರದಿಯಾಗಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಅಧಿಕೃತ ಮಾಹಿತಿ ನೀಡುವ ನಿರೀಕ್ಷೆ ಇದೆ.

RELATED ARTICLES  ವೈಯಕ್ತಿಕ ದ್ವೇಷ : ಮಹಿಳೆಯೊಬ್ಬಳ ಮೇಲೆ ಪುನಃ ಹಲ್ಲೆ ? ದೂರು - ಪ್ರತಿದೂರು ದಾಖಲು