ಹೊನ್ನಾವರ : ಪಟ್ಟಣದ ಲಯನ್ಸ ಕ್ಲಬ್ ಆವರಣದಲ್ಲಿ ಶಿರಸಿ ಬ್ಯಾಗದ್ದೆಯ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಇವರಿಂದ ತಾಲೂಕಿನ ಆಟೋ ರಿಕ್ಷಾ ಚಾಲಕ ಮಾಲಕರಿಗೆ ಉಚಿತ ಸಮವಸ್ತ್ರ ವಿತರಣೆ, ರಿಕ್ಷಾ ಪಾಸಿಂಗ್ ಯೋಜನೆ, ಔತಣಕೂಟ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ರಾಜ್ಯದ ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ರಿಕ್ಷಾ ಚಾಲಕರು ತೀರಾ ಸಂಕಷ್ಟದಲ್ಲಿದ್ದಾರೆ. ನಮ್ಮ ಜಿಲ್ಲೆಯಲ್ಲಿ ರಿಕ್ಷಾ ಚಾಲಕರ ಮೇಲೆ ಯಾವುದೇ ಆರೋಪವಿರದ ರೀತಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರ ಗ್ಯಾರಂಟಿ ಯೋಜನಯಿಂದ ರಿಕ್ಷಾ ಚಾಲಕರು ಸಂಕಷ್ಟದಲ್ಲಿದ್ದು, ಇವರಿಗೆ ನೆರವಾಗಬೇಕು ಎಂದು ಮುಂದಿನ ದಿನದಲ್ಲಿ ವಿಧಾನಸೌದದಲ್ಲಿ ಧ್ವನಿ ಎತ್ತುವೆ. ರಿಕ್ಷಾ ಮಾಲಕ ಚಾಲಕ ಸಂಘದ ಅಧ್ಯಕ್ಷನಾಗಿ ಈ ಹಿಂದೆ ಕಾರ್ಯನಿರ್ವಹಿಸಿರುದರಿಂದ ಮೂರು ಬಾರಿ ಶಾಸಕನಾಗಲು ಸಹಾಯವಾಯಿತು. ರಿಕ್ಷಾ ಚಾಲಕರಿಗೆ ಪಾಸಿಂಗ್ ಮಾಡಲು ಯಾವುದೇ ಏಜೆಂಟ್ ಇಲ್ಲದೇ ಕಾರ್ಯನಿರ್ವಹಿಸಬೇಕು ಎಂದು ಆರ್.ಟಿ.ಓ ಆದೇಶ ನೀಡಿದ್ದೇನೆ. ರಿಕ್ಷಾದವರಿಗೆ ಇನ್ಸರೆನ್ಸ ಸಹಾಯಧನ ಸರ್ಕಾರ ಮಾಡಲು ಮುಂದಾಗಬೇಕು ಎಂದು ಆಗ್ರಹಿಸುದಾಗಿ ಭರವಸೆ ನೀಡಿದರು.
ಮಾಜಿ.ಜಿ.ಪಂ.ಸದಸ್ಯರಾದ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಟ್ರಸ್ಟ್ ಮೂಲಕ ಅನೇಕ ಸಮಾಜಮುಖಿ ಕಾರ್ಯದಲ್ಲಿ ಅನಂತಮೂರ್ತಿ ಹೆಗಡೆಯವರ ಕಾರ್ಯ ಹೆಮ್ಮೆ ಎನಿಸುತ್ತಿದೆ. ದಾನ ಮಾಡುವವರು ಜೊತೆ ದಾನ ತೆಗೆದುಕೊಳ್ಳುವವರು ಅರ್ಹರಾಗಿಬೇಕಾಗಿದ್ದು, ಅಂತಹ ಕಾರ್ಯಕ್ರಮ ಇಂದು ನಡೆಯುತ್ತಿದೆ. ಸರ್ಕಾರ ಸಮಾನ ತಕ್ಕಡಿಯಂತೆ ಕಾರ್ಯ ನಿರ್ವಹಿಸಬೇಕು. ಗ್ಯಾರಂಟಿ ಯೋಜನೆಯಿಂದ ರಿಕ್ಷಾ ಚಾಲಕರ ಕುಟುಂಬ ನಿರ್ವಹಣೆ ಸಂಕಷ್ಟ ತಂದಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸುವ ಮೂಲಕ ಇವರಿಗೆ ಅನೂಕೂಲ ಮಾಡುವ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಶ್ರೀಕುಮಾರ ಸಮೋಹ ಸಂಸ್ಥೆಯ ಮಾಲಕರಾದ ವೆಂಕ್ರಟಮಣ ಹೆಗಡೆ ಕವಲಕ್ಕಿ ಮಾತನಾಡಿ ಬಡತನದಿಂದ ಬಂದ ಕುಟುಂಬದಿಂದ ಬಂದು ಜಿಲ್ಲೆಯೆಲ್ಲಡೆ ಹಲವು ಕಾರ್ಯಕ್ರಮದ ಮೂಲಕ ಜನಾನುರಾಗಿಯಾಗಿದ್ದಾರೆ. ಹೊನ್ನಾವರ ಆರ್.ಟಿ.ಓ ಕಛೇರಿಯಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದ್ದು, ಅದನ್ನು ಸರ್ಕಾರ ನಿವಾರಿಸುವ ಮೂಲಕ ಅಲ್ಲಿ ಬರುವ ವಾಹನ ಚಾಲಕರಿಗೆ ನೆರವಾಗುವಂತೆ ಆಗ್ರಹಿಸಿದರು.
ಜಿಲ್ಲಾ ಆಟೋ ಯೂನಿಯನ್ ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ ಇಂದು ಸರ್ಕಾರದಿಂದ ಆಟೋ ಚಾಲಕರಿಗೆ ಉಪಕಾರಕ್ಕಿಂತ ಅಪಕಾರವೇ ಆಗುತ್ತಿದೆ. ಈ ಹಿಂದಿನಿಂದಲೂ ಆಟೋದವರ ಮೇಲೆ ಒಂದೊಂದೆ ಚಪ್ಪಡಿ ಕಲ್ಲು ಇಡುತ್ತಾ ಬಂದು ಸಂಕಷ್ಟ ನೀಡುತ್ತಿದೆ. ಸರ್ಕಾರ ಮುಂದಿನ ದಿನದಲ್ಲಾದರೂ ಈ ಬಗ್ಗೆ ಗಮನಹರಿಸಬೇಕಿದೆ ಎಂದರು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಿಕ್ಷಾ ಚಾಲಕ ರಾಮ ಗೌಡ , ಗೌರಿ ಶ್ರೀಧರ ಹೆಗಡೆ ಇರ್ವರಿಗೆ ಆರ್ಥಿಕವಾಗಿ ಧನಸಹಾಯ ಇದೆ ವೇಳೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದ ಅಯೋಜಕರಾದ ಅನಂತಮೂರ್ತಿ ಹೆಗಡೆ ಮಾತನಾಡಿ ಖಾಕಿ ಎನ್ನುವುದು ಸೇವೆಯ ಸಂಕೇತ. ಚಾಲಕರು ತಮ್ಮ ಹೊಟ್ಟೆ ಬಟ್ಟೆ ಕಟ್ಟಿಕೊಂಡು ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಕುಟುಂಬದ ಜೀವನ ನಿರ್ವಹಣೆ ಬಗ್ಗೆ ಸದಾ ಕಾಲ ಯೋಚಿಸುತ್ತಾರೆ. ಇಂದು ಪಾಸಿಂಗ್ ಯೋಜನೆ ತಂದಿದ್ದು, ಮುಂದಿನ ದಿನದಲ್ಲಿ ಇನ್ಸರೆನ್ಸ,ಮಕ್ಕಳ ಶೈಕ್ಷಣಿಕ ಸಹಾಯ, ಉನ್ನತ ವ್ಯಾಸಂಗಕ್ಕೆ ಸೂಕ್ತ ತರಬೇತಿ ಕಾರ್ಯಕ್ರಮದ ಮೂಲಕ ನೆರವಾಗಲು ತಿರ್ಮಾನಿಸಿದ್ದೇನೆ ಎಂದರು.
ವೇದಿಕೆಯಲ್ಲಿ ಲಯನ್ಸ್ ಅಧ್ಯಕ್ಷ ಎಂ.ಜಿ.ನಾಯ್ಕ ತಾಲೂಕಿನ ಆಟೋ ರಿಕ್ಷಾ ಯೂನಿಯನ್ ಅಧ್ಯಕ್ಷ ಶಿವರಾಜ ಮೇಸ್ತ,ಅನಂತಮೂರ್ತಿ ಹೆಗಡೆ ಕುಟುಂಬದವರಾದ ಮಹಬೇಶ್ವರ ಹೆಗಡೆ, ಶಾರದಾ ಹೆಗಡೆ, ಜಗದೀಶ ಹೆಗಡೆ ರಿಕ್ಷಾ ಯೂನಿಯನ್ ಅಧ್ಯಕ್ಷರು ಉಪಸ್ಥಿತರಿದ್ದರು.
ನಿಜವಾಗಿಯೂ ನಾವು ಕಷ್ಟದ ಸ್ಥಿತಿಯಲ್ಲಿ ಇದ್ದೇವೆ. ನಮಗೆ ಅನಂತಮೂರ್ತಿ ಹೆಗಡೆ ಟ್ರಸ್ಟ್ ನವರು ದೇವರಂತೆ ಬಂದಿದ್ದಾರೆ. ಸರಕಾರ ಮಾಡಬೇಕಾದ ಕಾರ್ಯವನ್ನು ಟ್ರಸ್ಟ್ ಮಾಡುತ್ತಿದೆ – ನಾಗರಾಜ ನಾಯ್ಕ, ರಿಕ್ಷಾ ಚಾಲಕ.
ಈ ಟ್ರಸ್ಟ್ ದೇವರಂತೆ ನಮ್ಮನ್ನು ಪೊರೆಯುತ್ತದೆ ಅನಿಸುತ್ತದೆ. ಕಷ್ಟದಲ್ಲಿ ಇದ್ದವರ ಪಾಲಿಗೆ ನೆರವಾದ ಅನಂತಮೂರ್ತಿ ಹೆಗಡೆ ನಿಜವಾಗಿಯೂ ಇತರರಿಗೆ ಆದರ್ಶ – ಜೀವನ ಅಂಬಿಗ.