ಹೊನ್ನಾವರ : ತಾಲೂಕಿನ ರಾಮತೀರ್ಥದಲ್ಲಿ ಈಜಲು ಹೋಗಿದ್ದ ಕಾಲೇಜು ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಯುವಕನನ್ನು ಹೊನ್ನಾವರ ಪಟ್ಟಣದ ರಾಯಲಕೇರಿಯ ಮಣಿಕಂಠ ಮಂಜುನಾಥ್ ನಾಯ್ಕ(17) ಎಂದು ಗುರುತಿಸಲಾಗಿದೆ. ಇತನು ಹೊನ್ನಾವರ ಸರಕಾರಿ ಪ.ಪೂ ಕಾಲೇಜಿನ ವಿದ್ಯಾರ್ಥಿ. ಮಳೆಯ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಇದ್ದ ಕಾರಣ ಗೆಳೆಯರೊಂದಿಗೆ ಸೇರಿ ಈಜಲು ತೆರಳಿದ್ದ. ಧಾರಾಕಾರ ಮಳೆ ನಡುವೆ ತುಂಬಿದ ರಾಮತೀರ್ಥ ನೀರಿನಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

RELATED ARTICLES  ಕಾಡು ಬೆಳೆಸಿ ನಾಡು ಉಳಿಸಿ ಜಾಥಾ ಕಾರ್ಯಕ್ರಮ : ಎಲ್ಲೆಡೆ ಪರಿಸರ ಜಾಗ್ರತಿಯ ಅರಿವು.