ಕುಮಟಾ : ಕ್ಷೇತ್ರದ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದಿನಕರ ಶೆಟ್ಟಿಯವರ ಜನ್ಮದಿನದ ನಿಮಿತ್ತ ಪಟ್ಟಣದ ನೆಲ್ಲಿಕೇರಿ ಸರಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನಲ್ಲಿ  ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಬಾದಾಮಿ ಮುಂತಾದ ಗಿಡಗಳನ್ನು ನೆಡುವುದರ ಮೂಲಕ ಶಾಸಕರ ಜನ್ಮದಿನವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಿದರು.

ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳು, ಇತಿಹಾಸ ಉಪನ್ಯಾಸಕರಾದ ರಾಘವೇಂದ್ರ ಮಡಿವಾಳ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಅರಣ್ಯ ಇಲಾಖೆಯವರು ನೀಡಿದ ಬಾದಾಮಿ ಮುಂತಾದ ಗಿಡಗಳನ್ನು ಕಾಲೇಜಿನ ಆವರಣದಲ್ಲಿ ನೆಟ್ಟರು. 

RELATED ARTICLES  ಕುಮಟಾ ಹೊನ್ನಾವರದಲ್ಲಿ‌ ಕಾಂಗ್ರೆಸ್ ನಿಂದ ನಡೆದಿದೆ ಚುನಾವಣಾ ರಣತಂತ್ರ.

ಕಳೆದ ವರ್ಷ ಸ್ವತಃ ಶಾಸಕರೇ ತಮ್ಮ ಜನ್ಮದಿನದಂದು ಆಗಮಿಸಿ ನೆನಪಿಗಾಗಿ ಗಿಡಗಳನ್ನು ನೆಟ್ಟು ಅದನ್ನು ಪೋಷಿಸುವ ಜವಾಬ್ದಾರಿ ವಿದ್ಯಾರ್ಥಿಗಳದ್ದು ಎಂದು ತಿಳಿಸಿ, ವಿದ್ಯಾರ್ಥಿಗಳಿಗೆ ಪರಿಸರ ಅರಿವಿನ ಹಾಗೂ ಜವಾಬ್ದಾರಿಯ ಪಾಠ ಮಾಡಿದ್ದರು. 

ಅದೇ ಪ್ರಕಾರ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಅವುಗಳನ್ನು ಪೋಷಿಸಿಕೊಂಡು ಬಂದ ವಿದ್ಯಾರ್ಥಿಗಳು ಈ ವರ್ಷವೂ ಶಾಸಕರ ಜನ್ಮದಿನ ನಿಮಿತ್ತ ಸ್ವಪ್ರೇರಣೆಯಿಂದ ಗಿಡಗಳನ್ನು ನೆಡುವುದರ ಮೂಲಕ ಶಾಸಕರ ಮೇಲಿನ ಆಭಿಮಾನ ಹಾಗೂ ಸಸ್ಯಪ್ರೀತಿಯನ್ನು ಮೆರೆದಿದ್ದಾರೆ.

RELATED ARTICLES  ವಿಸ್ತಾರ ಕಾಯಕ ಯೋಗಿ ಪ್ರಶಸ್ತಿಗೆ ಆರ್ .ಕೆ. ಬಾಲಚಂದ್ರ ಆಯ್ಕೆ

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರಾದ ರೋಹಿತ ನಾಯಕ ಹಾಗೂ ಸಂಸ್ಕೃತ ಉಪನ್ಯಾಸಕ ಗಣೇಶ ಭಟ್ಟ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.