ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಹೊನ್ನಾವರದ ಸಂಶಿ ತೆಂಗಾರದಲ್ಲಿ ನಾಗರಾಜ ನಾಯ್ಕ ಎಂಬುವವರ ಮನೆ ಹಿಂಭಾಗದಲ್ಲಿ ಗುಡ್ಡ ಕುಸಿದ ಮಣ್ಣ ಹಾಗೂ ಬಂಡೆಗಲ್ಲು ಉರುಳಿ ಶೌಚಾಲಯ ಹಾಗೂ ಮನೆಯ ಗೋಡೆ ಜಖಂ ಆಗಿದೆ. ಅದರಷ್ಟವಶಾತ್ ಅನಾಹುತದ ಮುನ್ನೆಚ್ಚರಿಕೆ ಅರಿತು ಕುಟುಂಬ ಮೊದಲೇ ಮನೆ ತೊರೆದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.