ಭಟ್ಕಳ: ಗೊಂಡರಕೇರಿ ಕಿತ್ರೆ ದೇವಿಮನೆ ಹತ್ತಿರದಲ್ಲಿ ನಾಯಿಯ ದಾಳಿಯಿಂದ ರಕ್ಷಿಸಿಕೊಳ್ಳಲು ಹೋಗಿ ತೋಟದ
ಬಾವಿಯೊಂದಕ್ಕೆ ಬಿದ್ದಿದ್ದ ಜಿಂಕೆಯನ್ನು ಅಗ್ನಿಶಾಮಕ ದಳದ‌ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಕಿತ್ರೆ ದೇವಿಮನೆ ಗೊಂಡರಕೇರಿ ಮಂಗಳಾ ಗೊಂಡ ಎನ್ನುವವರ ತೋಟದಲ್ಲಿ ನಾಯಿಗಳು ದಾಳಿಗೆ ಹೆದರಿದ ಜಿಂಕೆಯೊಂದು ಸುಮಾರು 25 ಅಡಿ ಆಳದ ಬಾವಿಯಲ್ಲಿ ಬಿದ್ದಿರುವ ಬಗ್ಗೆ ಡಿ.ಆರ್.ಆಫ್.ಓ ಸಂದೀಪ ಭಂಡಾರಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

RELATED ARTICLES  ಅಸಮರ್ಪಕ ಘನತ್ಯಾಜ್ಯ ವಿಲೇವಾರಿ ಘಟಕ: ಕಾರವಾರದಲ್ಲಿ ಹೆಚ್ಚುತ್ತಿದೆ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ.

ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಜಿಂಕೆಯನ್ನು ಸುರಕ್ಷಿತವಾಗಿ‌ ಮೇಲಕ್ಕೆ ತಂದು ರಕ್ಷಣೆ ಮಾಡಿ ಅರಣ್ಯ ಅಧಿಕಾರಿಗಳಿಗೆ
ಒಪ್ಪಿಸಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ರಮೇಶ ಹಾಗೂ ಸಿಬ್ಬಂದಿ ಕುಮಾರ ನಾಯ್ಕ, ಪುರುಷೋತ್ತಮ ನಾಯ್ಕ, ಅಗ್ನಿಶಾಮಕ ಚಾಲಕ ಶಿವಪ್ರಸಾದ
ನಾಯ್ಕ, ಅರಣ್ಯಾಧಿಕಾರಿ ಸಂದೀಪ ಭಂಡಾರಿ ಹಾಗೂ ತಂಡದವರು ಉಪಸ್ಥಿತರಿದ್ದರು.

RELATED ARTICLES  ತದಡಿಯ ಸಮುದ್ರತೀರದ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ