ಹೊನ್ನಾವರ: ತಾಲೂಕಿನ ವಂದೂರು ವಿ.ಎಸ್.ಎಸ್.ಸಂಘದ ಅಧ್ಯಕ್ಷರಾಗಿ ವಿ.ಕೆ.ವಿಶಾಲ್ ಮತ್ತು ಉಪಾಧ್ಯಕ್ಷರಾಗಿ ಡಾ. ಸತೀಶ ಭಟ್ಟ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಸಂಘದ ಆಡಳಿತ ಉತ್ಸಾಹಿ ಯುವಕನ ರಾಜಕೀಯ ಚಾಣಾಕ್ಷತೆಗೆ ಒಲಿದಿದೆ.
ಸಿ.ಎ.ಮಧ್ಯಂತರ ಶಿಕ್ಷಣ ಪೂರೈಸಿರುವ ಯುವ ನಾಯಕ ವಿ.ಕೆ.ವಿಶಾಲ ಸಹಕಾರಿ ರಂಗದತ್ತ ಆಸಕ್ತಿ ಹೊಂದಿ, ಸಚಿವರಾದ ಮಂಕಾಳ ವೈದ್ಯರ ಮಾರ್ಗದರ್ಶನದಲ್ಲಿ ಹಿಂದೆ ಪಿ.ಎಲ್.ಡಿ .ಬ್ಯಾಂಕಿನ ನಿರ್ದೇಶಕರಾಗಿದ್ದರು. ಇದೀಗ ಸಂಘದ ಎಲ್ಲಾ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗುವುದರ ಮೂಲಕ ಯುವಕರು ಸಹಕಾರಿ ರಂಗಕ್ಕೆ ಬರಲು ಪ್ರೇರಣೆಯಾಗಿದ್ದಾರೆ. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ವಿಶಾಲ್, `ರಾಜಕೀಯವನ್ನು ಇಲ್ಲಿಗೆ ಮುಗಿಸೋಣ. ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯೋಣ. ಸರ್ಕಾರದಿಂದ ರೈತರಿಗೆ ದೊರೆಯುವ ಸೌಲಭ್ಯವನ್ನು ತಂದು ಅರ್ಹ ರೈತರಿಗೆ ಮುಟ್ಟಿಸಲು ಶಕ್ತಿಮೀರಿ ಪ್ರತ್ನಿಸುವುದಾಗಿ ಭರವಸೆ ನೀಡಿದರು. ಈ ಯುವ ನಾಯಕನಿಗೆ ಸಚಿವ ಮಂಕಾಳ ವೈದ್ಯ ಅಭಿನಂದಿಸಿ ಸಹಕಾರಿ ಸಂಘದ ಮೂಲಕ ರೈತರ ನೆರವಿಗೆ ಮುಂದಾಗುವಂತೆ ಸಲಹೆ ನೀಡಿದ್ದಾರೆ.