ಕಾರವಾರ : ವಿದ್ಯುತ್ ಶಾರ್ಟಸೆರ್ಕ್ಯೂಟ್ ನಿಂದ ದನದ ಕೊಟ್ಟಿಗೆಗೆ ಬೆಂಕಿ ತಗಲಿ 7 ಜಾನುವಾರಗಳ ಸಜೀವ ದಹನ ಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹಳೂರಿನಲ್ಲಿ ನಡೆದಿದೆ. ಮಂಜುನಾಥ ಶೇಟ್ ಎಂಬುವವರಿಗೆ ಸೇರಿದ ಜಾನುವಾರಗಳು ಇದಾಗಿದ್ದು ತಡ ರಾತ್ರಿ ಆಕಸ್ಮಿಕವಾಗಿ ಆದ ವಿದ್ಯುತ್ ಷಾರ್ಟ ಸೆರ್ಕ್ಯೂಟ್ ನಿಂದ ಕೊಟ್ಟಿಗೆಗೆ ಬೆಂಕಿ ತಗುಲಿ ನಾಲ್ಕು ಆಕಳು, ಮೂರು ಕರುಗಳು ಸಜೀವ ದಹಿಸಿ ಹೋಗಿದೆ. ಅಂದಾಜು 25 ಲಕ್ಷ ಮೌಲ್ಯದ ಜಾನುವಾರಗಳು ಇದಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದೆ. ಅದೃಷ್ಟವಶಾತ್ ಮನೆಯಿಂದ ಕೊಟ್ಟಿಗೆ ದೂರ ಇರುವುದರಿಂದಾಗಿ ಮನೆಯವರು ಬೆಂಕಿ ಅನಾಹುತದಿಂದ ಪಾರಾಗಿದ್ದಾರೆ.

RELATED ARTICLES  ದಿನಕರ ಶೆಟ್ಟಿಯವರಿಗೆ ಗೌರವಾರ್ಪಣೆ ಮಾಡಿದ ನಾಡವರ ಸಮುದಾಯ.