ಕಾರವಾರ :- ಗೋವಾ ದಿಂದ ಸಮುದ್ರ ಅಧ್ಯಯನಕ್ಕೆ ತೆರಳಿದ್ದ ನೌಕೆಯಲ್ಲಿ ಎಂಜಿನ್ ವೈಪಲ್ಯ ದಿಂದ ಮುಳುಗುವ ಹಂತ ತಲುಪಿದ ನೌಕೆಯನ್ನು ಭಾರತೀಯ ಕೋಸ್ಟ್ ಗಾರ್ಡ ಸಿಬ್ಬಂದಿಗಳು ನೌಕೆಯಲ್ಲಿದ್ದ 36 ಜನರ ರಕ್ಷಣೆ ಮಾಡಿದ ಘಟನೆ ಗೋವಾ -ಕಾರವಾರ ಗಡಿಯ ಅರಬ್ಬಿ ಸಮುದ್ರದಲ್ಲಿ ನಡೆದಿದೆ. ಗೋವಾದಿಂದ ಅರಬ್ಬಿ ಸಮುದ್ರದಲ್ಲಿ ಸಂಶೋಧನೆಗೆ ತೆರಳಿದ್ದ ನ್ಯಾಷನಲ್ ಓಷಿಯಾನೋಗ್ರಾಫಿಕ್ ಇನ್ಸಿಟ್ಯೂಟ್ ಹಡಗು ಸಂಶೋಧನೆ ಕೇಂದ್ರದ “ಸಿಂಧು ಸಾಧನ” ಹಡಗು 36 ಜನರೊಂದಿಗೆ ಪಣಜಿ ಯಿಂದ ಹೊರಟು ಅರಬ್ಬಿ ಸಮುದ್ರದ ಮೂಲಕ ಕಾರವಾರ ಬಂದರಿಗೆ ಆಗಮಿಸುವ ಮಾರ್ಗದಲ್ಲಿ ಇಂಜಿನ್ ವೈಪಲ್ಯ ದಿಂದ ಮುಳುಗುವ ಹಂತದಲ್ಲಿದ್ದು ಭಾರತೀಯ ಕೋಸ್ಟ್ ಗಾರ್ಡ ನ ಸಿ.ಐಆರ್, ಎನ್.ಐ.ಒ ಹಡಗಿನಿಂದ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದ್ದು ಮುಳುಗುತಿದ್ದ ಹಡಗಿನ ಸಮೇತ ಗೋವಾದ ವಾಸ್ಕೊದ ಬಂದರಿಗೆ ಕರೆತರಲಾಗುತಿದ್ದು 28 ಜುಲೈ ರಂದು ವಾಸ್ಕೋಗೆ 36 ಜನರ ಸಂಶೋಧಕ ತಂಡದ ಸದಸ್ಯರು ಮರಳಲಿದ್ದು ಎಲ್ಲರೂ ಸುರಕ್ಷಿತರಾಗಿದ್ದಾರೆ.

RELATED ARTICLES  ಯುಗಾದಿ ಉತ್ಸವ ಜನರನ್ನು ಒಗ್ಗೂಡಿಸಬೇಕು : ಚೈತ್ರಾ ಕುಂದಾಪುರ