ಅಂಕೋಲಾ: ಪಟ್ಟಣದ ಬಸ್ ನಿಲ್ದಾಣದ ಎದುರಿನ ರಿಕ್ಷಾ ಸ್ಟ್ಯಾಂಡ್ ಕ್ರಾಸ್ ಬಳಿ ಪೊಲೀಸ್ ಸಿಬ್ಬಂದಿಗಳಿದ್ದ ಮೋಟಾರ್ ಸೈಕಲ್’ಗೆ ಗೂಡ್ಸ್ ವಾಹನವೊಂದು ಡಿಕ್ಕಿ ಹೊಡೆದಿದ್ದು, ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾದ ಘಟನೆ ನಡೆದಿದೆ.

ಅಂಕೋಲಾ ಪೊಲೀಸ್ ಠಾಣೆಯ ಕರ್ತವ್ಯನಿರತ ಎಎಸ್ಐ ಹಾಗೂ ಇನ್ನೋರ್ವ ಹವಾಲ್ದಾರ ಕುಮಟಾ ಕಡೆಯಿಂದ ಅಂಕೋಲಾ ಪಟ್ಟಣದ ಕಡೆ ಬರುವ ಮುಖ್ಯ ರಸ್ತೆ ದಿನಕರ ದೇಸಾಯಿ ಮಾರ್ಗದಲ್ಲಿ ತಮ್ಮ ಬೈಕ್ ಮೇಲೆ ಪೊಲೀಸ್ ಠಾಣೆಯತ್ತ ಬರುತ್ತಿರುವಾಗ, ಅಂಕೋಲಾ ಬಸ್ ನಿಲ್ದಾಣದ ಎದುರಿನ ರಿಕ್ಷಾ ಸ್ಟ್ಯಾಂಡ್ ಕ್ರಾಸ್ ಬಳಿ, ಕೆ.ಸಿ.ರಸ್ತೆ ಕಡೆಯಿಂದ ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ತನ್ನ KA 30 A 3174 ನಂಬರಿನ ಟಾಟಾ ಏಸ್ ಮೆಗಾ ಎಕ್ಸೆಲ್ ಗೂಡ್ಸ ರಿಕ್ಷಾ ಚಲಾಯಿಸಿಕೊಂಡು ಬಂದ ವಾಹನ ಚಾಲಕ, ಪೊಲೀಸ್ ಸಿಬ್ಬಂದಿಗಳಿದ್ದ ಬೈಕಿಗೆ ಜೋರಾಗಿ ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ನಲ್ಲಿದ್ದ ಎಎಸ್ಐ ಮತ್ತು ಹವಾಲ್ದಾರ ಇಬ್ಬರೂ ಸಿಡಿದು ಬಿದ್ದು, ಬೈಕಿಗೂ ಜಖಂ ಪಡಿಸಿದ್ದಾನೆ. ಈ ವೇಳೆಯಲ್ಲಿ ಚಾಲಕ ವಾಹನವನ್ನೂ ನಿಲ್ಲಿಸದೇ ಹಾಗಯೇ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

RELATED ARTICLES  ಪ್ರಕಟವಾಯ್ತು ಕುಮಟಾ ಪಿ.ಎಲ್.ಡಿ ಬ್ಯಾಂಕ್ ಚುನಾವಣಾ ಫಲಿತಾಂಶ: ಆಯ್ಕೆಯಾದ ನೂತನ ಸದಸ್ಯರ ಪಟ್ಟಿ ಇಲ್ಲಿದೆ!