ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ವೆಸ್ಟ್​ ಇಂಡೀಸ್​ ವಿರುದ್ಧದ 2 ಟೆಸ್ಟ್​ ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿ ಮಿಂಚಿದ್ದರು. ಸದ್ಯ ಇದೇ ವರ್ಷದಲ್ಲಿ ಏಷ್ಯಕಪ್​ ಹಾಗೂ ವಿಶ್ವಕಪ್​ ಪಂದ್ಯಗಳು ನಡೆಯುವುದರಿಂದ ಸಿರಾಜ್​ಗೆ ಕೆರಿಬಿಯನ್​ ಟೂರ್​ನಿಂದ ರೆಸ್ಟ್​ ನೀಡಲಾಗಿದೆ. ವೆಸ್ಟ್​ ಇಂಡೀಸ್​ ವಿರುದ್ಧದ 3 ಪಂದ್ಯಗಳ ಸರಣಿಯಿಂದ ಫೇಸರ್ ಸಿರಾಜ್​ಗೆ ವಿಶ್ರಾಂತಿ ನೀಡಲಾಗಿದೆ. ಕೆರಿಬಿಯನ್​ನಿಂದ ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್, ಅಜಿಂಕ್ಯಾ ರಹಾನೆ, ಕೆಎಸ್ ಭರತ್ ಮತ್ತು ನವದೀಪ್ ಸೈನಿಯವರ ಜೊತೆ ಸಿರಾಜ್ ಕೂಡ ತವರಿಗೆ ಹಿಂತಿರುಗಿದ್ದಾರೆ ಎಂದು ಹೇಳಲಾಗಿದೆ.

RELATED ARTICLES  ಅವಲೋಕನ ಪುಸ್ತಕಕ್ಕೆ ರಾಘವೇಶ್ವರ ಶ್ರೀಗಳಿಂದ ದಿವ್ಯಾಶೀರ್ವಾದ.

ಕೆರಿಬಿಯನ್​ ಟೂರ್​ನಿಂದ ಸಿರಾಜ್​ಗೆ ರೆಸ್ಟ್​ ನೀಡುವುದರಿಂದ ಅವರ ಮೇಲಿನ ವರ್ಕ್​ ಲೋಡ್ ಕಡಿಮೆ ಮಾಡಲಾಗುತ್ತದೆ. ಏಷ್ಯಕಪ್ ಹಾಗೂ ವಿಶ್ವಕಪ್​ನಲ್ಲಿ ಪ್ರಬಲವಾಗಿ ಬೌಲಿಂಗ್​ ದಾಳಿ ಮಾಡಲು ಈಗಲೇ ಸಿರಾಜ್​ಗೆ ವಿಶ್ರಾಂತಿಯನ್ನು ಬಿಸಿಸಿಐ ನೀಡಿದೆ. ಮೊಹಮ್ಮದ್​ ಶಮಿ ಕೂಡ ಈಗಾಗಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

RELATED ARTICLES  ಕೆನರಾ ಬ್ಯಾಂಕ್ ಪ್ರಾಯೋಜಿತ ಕೆನ್ ಪಿನ್ ಹೋಮ್ಸ್ ಲಿಮಿಟೆಡ್ (ಸಿಎಫ್‍ಹೆಚ್’ಎಲ್’) ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಸಿನಿಯರ್ ಮ್ಯಾನೇಜರ್, ಪ್ರೋಬೆಷನರಿ ಆಫೀಸರ್ ಹುದ್ದೆಗಳಿಗೆ ನೇಮಕಾತಿ.