ಕುಮಟಾ : ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವತಿಯಿಂದ ಆಗಸ್ಟ್ ತಿಂಗಳಲ್ಲಿ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಜಿಲ್ಲಾ ಕಾರ್ಯದರ್ಶಿಗ ಶ್ರೀ ಗಣೇಶ ಭಟ್ಟ ಮೂರೂರು ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಯಲ್ಲಿ ಈ ಕವಿಗೋಷ್ಠಿ ನಡೆಯಲಿದ್ದು, ಆಯ್ಕೆಯಾದ ಕೆಲವು ಕವಿತೆಗಳು ರಾಜ್ಯಮಟ್ಟದಲ್ಲಿ ಸ್ಥಾನಪಡೆಯಲಿವೆ. ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಆಯ್ಕೆಯಾದ ಕವಿತೆಗಳ ವಾಚನಕ್ಕೆ ಅವಕಾಶವಿದ್ದು, ಕೊನೆಯಲ್ಲಿ ಮೊದಲ ಮೂರು ಕವಿತೆಗಳನ್ನು ಗುರುತಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಕವಿಗೋಷ್ಠಿಗಳು ಆಯಾ ಜಿಲ್ಲಾ ಕೇಂದ್ರದಲ್ಲಿ ಇಲ್ಲವೇ ಜಿಲ್ಲೆಯ ನಿಗದಿತ ಸ್ಥಳದಲ್ಲಿ ಆಗಸ್ಟ್ ಎರಡನೆಯ ವಾರದಲ್ಲಿ ಜರುಗಲಿದೆ. ರಾಜ್ಯ ಮಟ್ಟದ ಕವಿಗೋಷ್ಠಿ ಆಗಸ್ಟ್ ತಿಂಗಳ ಕೊನೆಯಲ್ಲಿ ಜರುಗಲಿದ್ದು, ಸ್ವರಾಜ್ಯ ಸುರಾಜ್ಯ ಇದು ಕವಿಗೋಷ್ಠಿಯ ವಿಷಯವಾಗಿದೆ. ಸ್ವರಾಜ್ಯ ಬಂತೆಂತು, ಸುರಾಜ್ಯ ಸ್ಥಾಪನೆಯೆಂತು ಎಂಬ ವಾಸ್ತವಿಕತೆ ಮತ್ತು ತಾತ್ತ್ವಿಕತೆಗಳು ಒಂದು ಭಾವವಾಗಿ ಇಲ್ಲಿ ರೂಪಪಡೆಯಬೇಕೆಂಬುದು ಇದರ ಆಶಯ.

RELATED ARTICLES  ಮಳೆಯ ಮುನ್ಸೂಚನೆ : 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ನಿಯಮಗಳು ಇಂತಿವೆ.

* ಕವಿತೆಯು ಕನಿಷ್ಠ 60 ರಿಂದ ಗರಿಷ್ಠ 100 ಪದಗಳು (ಸುಮಾರು 12ರಿಂದ 20 ಸಾಲುಗಳು).
* ಸ್ವರಾಜ್ಯ ವಿಷಯ ಬಿಟ್ಟು ಬೇರೆ ವಿಷಯದ ಮೇಲಿನ ಕವಿತೆಗಳನ್ನು ಪರಿಗಣಿಸಲಾಗುವುದಿಲ್ಲ.
* ಯಾವುದೇ ಭಾರತೀಯ ಭಾಷೆಯಲ್ಲಿ ಕವನವಾಚನ ಮಾಡಬಹುದು, ಆದರೆ ಅದರ ಕನ್ನಡ ಕವಿತಾರೂಪವನ್ನು (ಭಾವಾರ್ಥವಲ್ಲ) ಕಳಿಸಬೇಕು.
* ಕವಿತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಗಳಿಗೇ ಕಳಿಸಬೇಕು.
* ಜಿಲ್ಲಾ ಕವಿಗೋಷ್ಠಿಯಲ್ಲಿ ವಾಚಿಸಲ್ಪಟ್ಟ ಕವಿತೆಗಳನ್ನು ಮಾತ್ರ ರಾಜ್ಯಮಟ್ಟಕ್ಕೆ ಪರಿಗಣಿಸಲಾಗುವುದು.
* ವಯೋಮಿತಿಯ ನಿರ್ಬಂಧ ಇಲ್ಲವಾಗಿದ್ದು,  ಒಬ್ಬರು ಒಂದು ಕವಿತೆಯನ್ನು ಮಾತ್ರ ವಾಚಿಸಬಹುದು.

RELATED ARTICLES  ಜೂನಿಯರ್ ಆಫೀಸರ್ ಹುದ್ದೆ ಖಾಲಿ ಇದೆ

ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಆಸಕ್ತರು ಅಗಸ್ಟ್ 7 ರ ಒಳಗಾಗಿ ಕವಿತೆಗಳನ್ನು ಕಾರ್ಯದರ್ಶಿಗಳಾದ ಗಣೇಶ್ ಭಟ್ ಮೂರೂರು ಅವರ ಮೊಬೈಲ್ ಸಂಖ್ಯೆ+91 6363 317 026 ಗೆ ವಾಟ್ಸಪ್ ಮೂಲಕ ಕಳುಹಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.