ಕುಮಟಾ : ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಬೇರೆ ‌ತಾಲೂಕುಗಳಿಗೆ  ವರ್ಗಾವಣೆ  ಹಾಗೂ ಮುಂಬಡ್ತಿ ಹೊಂದಿ ತೆರಳುತ್ತಿರುವ ಅಧಿಕಾರಿ, ಸಿಬ್ಬಂದಿಗಳನ್ನು ತಾಲೂಕಿನ ಹವ್ಯಕ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ  ಜಿ. ಸತೀಶ್ ಮಾತನಾಡಿ, ಕುಮಟಾ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಣೇಶ ಜಿ ಪಟಗಾರ ಇವರು ಇಲಾಖೆಯ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಕಚೇರಿ ಹಾಗೂ   ವಿದ್ಯಾರ್ಥಿ ನಿಲಯಗಳ ಸಿಬ್ಬಂದಿಗಳು, ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಮಾದರಿ  ಅಧಿಕಾರಿಗಳಾಗಿದ್ದಾರೆ.

ಇವರು ತಮ್ಮ ಮಾತೃ ಇಲಾಖೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳಾಗಿ ಕಾರವಾರಕ್ಕೆ ತೆರಳುತ್ತಿದ್ದಾರೆ. ವರ್ಗಾವಣೆ ಹೊಂದಿರುವ ನಿಲಯ ಮೇಲ್ವಿಚಾರಕರಾದ‌ ಪೂರ್ಣಿಮಾ ಕಿಂದಳಕರ್,  ಅಡುಗೆಯವರಾಗಿ  ಮುಂಬಡ್ತಿ ಹೊಂದಿರುವ  ಹರೀಶ್ ನಾಯ್ಕ, 

ಶಿವಪ್ರಸಾದ್ ನಾಯ್ಕ , ವಿದ್ಯಾ ಪಟಗಾರ ,ಸುಜಾತಾ  ಮೇಸ್ತಾ ಇವರೆಲ್ಲರ ಉತ್ತಮ ಸೇವೆಗೆ ಗೌರವಿಸಿ , ಶುಭ ಹಾರೈಸಿದರು ಹಾಗೂ  ನಿಲಯದ ವಿದ್ಯಾರ್ಥಿಗಳ ಪ್ರತಿಭೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

RELATED ARTICLES  ಹಿರೇಗುತ್ತಿ ಸರಕಾರಿ ಪದವಿ ಪೂರ್ವ ಕಾಲೇಜು-ವಾಣಿಜ್ಯ ಹಾಗೂ ವಿಜ್ಞಾನದಲ್ಲಿ ನೂರಕ್ಕೆ ನೂರುಫಲಿತಾಂಶ

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕು ಪಂಚಾಯತ್ ಆಡಳಿತಾಧಿಕಾರಿಗಳು ಹಾಗೂ  ಡಯಟ್  ಪ್ರಾಂಶುಪಾಲರಾದ   ಎನ್. ಜಿ. ನಾಯಕ ಇವರು ‌ ಮಾತನಾಡಿ ಈ ಕಾರ್ಯಕ್ರಮದಲ್ಲಿ   ಸಂತೋಷದಿಂದ ಪಾಲ್ಗೊಂಡ ವಿದ್ಯಾರ್ಥಿಗಳ ಅನಿಸಿಕೆಗಳನ್ನು ಗಮನಿಸಿದಾಗ ಗಣೇಶ ಜಿ ಪಟಗಾರ ಹಾಗೂ ಹಾಸ್ಟೆಲ್  ಸಿಬ್ಬಂದಿಗಳು ಮನೆಯನ್ನು ಬಿಟ್ಟು  ಬಂದಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉತ್ತಮ ಸೌಕರ್ಯಗಳೊಂದಿಗೆ  ಮನೆಯ ವಾತಾವರಣ ಕಲ್ಪಿಸಿಕೊಡಲು ಶ್ರಮಿಸಿದ್ದಾರೆ ಎಂಬುದು ತಿಳಿಯುತ್ತದೆ  ಎಂದರು.

ಅತಿಥಿಗಳಾಗಿ ಭಾಗವಹಿಸಿದ್ದ ಕಾಗಾಲ ಲೋಕನಾಥ ಪ್ರೌಢ ಶಿಕ್ಷಣ ಸಂಸ್ಥೆಯ ಪ್ರಮುಖರು ನಿವೃತ್ತ ಮುಖ್ಯಾಧ್ಯಾಪಕರಾದ  ಜಿ. ಕೆ. ಪಟಗಾರ ಮಾತನಾಡಿ  ಕುಮಟಾದಲ್ಲಿ ಈ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳ ಕಾರ್ಯನಿರ್ವಹಣೆ ಶ್ಲಾಘನೀಯ  ಎಂದರು.

ಈ ಸಂದರ್ಭದಲ್ಲಿ ಗಣೇಶ ಪಟಗಾರ  ಇವರು ತಾನು  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳೊಂದಿಗೆ  ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿದ್ದು ತನ್ನ ಅದೃಷ್ಟವಾಗಿದೆ. ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರು ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಉತ್ತಮ ಸೌಕರ್ಯಗಳನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳ ಪಾಲಿಗೆ ತಂದೆತಾಯಿಯರಂತೆ ಶ್ರೇಷ್ಠರಾಗಿದ್ದಾರೆ.‌ ಸಹಕರಿಸಿದ ಸರ್ವರಿಗೂ ತಾಲೂಕು ಆಡಳಿತ,‌‌ ತಾಲೂಕು ಪಂಚಾಯತ್ ಅಧಿಕಾರಿ-ನೌಕರರಿಗೂ ಕೃತಜ್ಞತೆ ಸಲ್ಲಿಸಿದರು.

RELATED ARTICLES  ಮಹಿಳೆ ನಾಪತ್ತೆ ಪ್ರಕರಣ ದಾಖಲು..!

ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಭಾರತಿ ಆಚಾರಿ ಉಪಸ್ಥಿತರಿದ್ದರು. ವರ್ಗಾವಣೆ ಹೊಂದಿರುವ ಶ್ರೀಮತಿ ಪೂರ್ಣಿಮಾ, ಮುಂಬಡ್ತಿ ಹೊಂದಿರುವ ಹರೀಶ್, ವಿದ್ಯಾ , ಶಿವಪ್ರಸಾದ್, ಸುಜಾತಾ,  ವಿದ್ಯಾರ್ಥಿಗಳಾದ  ಮಹೇಶ್ ಕಲ್ಯಾಣಕರ್, ಲಕ್ಷ್ಮೀ ಲಮಾಣಿ, ರಂಜಿತಾ ಬೋರ್ಕರ್  ಅನಿಸಿಕೆ ವ್ಯಕ್ತಪಡಿಸಿದರು.

ನಿಲಯ ಮೇಲ್ವಿಚಾರಕರಾದ ಶ್ರೀಮತಿ ಭವ್ಯಾ ಸ್ವಾಗತಿಸಿದರು. ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳಾದ  ಗಜಾನನ ಹೆಗಡೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಪ್ರಥಮ ದರ್ಜೆ ‌ಸಹಾಯಕರಾದ  ಕೃಷ್ಣ ದೇವಾಡಿಗ ‌ಅಚ್ಚುಕಟ್ಟಾಗಿ‌ ನಿರೂಪಿಸಿದರು.

ಬಿ ಎಡ್ ವಿದ್ಯಾರ್ಥಿನಿ ನಾಗವೇಣಿ ಪಟಗಾರ ವಂದನಾರ್ಪಣೆ ಮಾಡಿದರು. ನಿಲಯ ಮೇಲ್ವಿಚಾರಕರಾದ ಶ್ರೀಮತಿ ಶ್ಯಾಮಲಾ ನಾಯ್ಕ ಹಾಗೂ ಸಿಬ್ಬಂದಿಗಳು ಸಹಕರಿಸಿದರು. ಹಾಸ್ಟೆಲ್ ವಿದ್ಯಾರ್ಥಿಗಳು ಈ ಭಾವನಾತ್ಮಕ  ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮ ಅರ್ಥಪೂರ್ಣಗೊಳಿಸಿದರು.