ಕುಮಟಾ : ತಾಲೂಕಿಗೆ ಹೊಂದಿಕೊಂಡ ಮೊಗಟಾ ಗ್ರಾಮಪಂಚಾಯತ್ ವ್ಯಾಪ್ತಿಯ ಬ್ರಹ್ಮೂರು ಗ್ರಾಮದ ವನದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಇದುವರೆಗೂ ರಸ್ತೆ ಸಂಪರ್ಕ ಇರಲಿಲ್ಲ. ಸುತ್ತಲೂ ಖಾಸಗಿ ಜಮೀನು ಇರುವ ಕಾರಣ ರಸ್ತೆ ನಿರ್ಮಾಣ ಕಗ್ಗಂಟಾಗಿತ್ತು. ಇದರಿಂದ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಹಾಗೂ ದೇವಸ್ಥಾನಕ್ಕೆ ಅಗತ್ಯವಿರುವ ಸರಕು ಸಾಮಗ್ರಿಗಳನ್ನು ಸಾಗಿಸಲು ಸಮಸ್ಯೆ ಉಂಟಾಗಿತ್ತು. ಬಹಳ ವರ್ಷಗಳ ಸಮಸ್ಯೆಗೆ ಮುಕ್ತಿದೊರಕುವ ಸಂದರ್ಭ ಈಗ ಒದಗಿಬಂದಿದೆ.

ದೇವಸ್ಥಾನದ ರಸ್ತೆಗೆ ಜಾಗ ನೀಡಲು ಖಾಸಗಿ ಜಮೀನಿನ ಮಾಲೀಕರು ಒಪ್ಪಿದ್ದು, ಬ್ರಹ್ಮೂರಿನ ಸಾರ್ವಜನಿಕ ಮೈದಾನದ ಹತ್ತಿರದಿಂದ ರಸ್ತೆ ನಿರ್ಮಾಣವಾಗಲಿದೆ. ಮಾರುತಿ ನಾಯ್ಕ, ಕೃಷ್ಣ ಭಟ್, ಗಣಪತಿ ಪಟಗಾರ ಹಾಗೂ ರಾಜು ಭಟ್ ಇವರು ದೇವಸ್ಥಾನಕ್ಕೆ ರಸ್ತೆಸಂಪರ್ಕ ಕಲ್ಪಿಸುವ ಉದ್ದೇಶಕ್ಕಾಗಿ ತಮ್ಮ ಸ್ವಂತ ಜಾಗವನ್ನು ನೀಡಿದ್ದು ಈ ನಾಲ್ವರ ಕೊಡುಗೆಯ ಬಗ್ಗೆ ಗ್ರಾಮಸ್ಥರು ಹಾಗೂ ದೇವಸ್ಥಾನದ ಭಕ್ತವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಗ್ರಾಮಸ್ಥರು ರಸ್ತೆಗಾಗಿ ಶ್ರಮದಾನ ಹಮ್ಮಿಕೊಂಡಿದ್ದು, ಭೂದಾನಿಗಳಾದ ಮಾರುತಿ ನಾಯ್ಕ ಹಾಗೂ ಗಣಪತಿ ಪಟಗಾರ ಅವರು ಗುದ್ದಲಿಪೂಜೆ ನೆರವೇರಿಸಿದ್ದಾರೆ.

RELATED ARTICLES  ಹೊನ್ನಾವರದಲ್ಲಿ ಕೋಮುಸಂಘರ್ಷ - ಹೊನ್ನಾವರ ಬಂದ್‍ಗೆ ಕರೆ 70ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ ಪೊಲೀಸರು

ಬ್ರಹ್ಮೂರು ಗ್ರಾಮಸ್ಥರು ಶಾಸಕ ಸತೀಶ್ ಸೈಲ್ ರನ್ನು ಭೇಟಿಯಾಗಿದ್ದು, ರಸ್ತೆನಿರ್ಮಾಣಕ್ಕೆ ಹಾಗೂ ಕಿರುಸೇತುವೆ ನಿರ್ಮಾಣಕ್ಕೆ ಅಗತ್ಯವಿರುವಅನುದಾನವನ್ನು ಈ ವರ್ಷದಲ್ಲಿಯೇ ಒದಗಿಸಿಕೊಡುವ ಭರವಸೆಯನ್ನು ಅವರು ನೀಡಿದ್ದಾರೆ. ಗ್ರಾಮಪಂಚಾಯತ್ ಸದಸ್ಯ ಸಂದೇಶ ನಾಯ್ಕ, ಕೇಶವ ದೇವಸ್ಥಾನದ ಅರ್ಚಕ ಸೀತಾರಾಮ ಪುರಾಣಿಕ, ವನದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ಕೃಷ್ಣ ಭಟ್, ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಶಂಕರ ಭಟ್, ಕಾರ್ಯದರ್ಶಿ ಸಚಿನ್ ನಾಯ್ಕ ಹಾಗೂ ಸಮಿತಿಯ ಸದಸ್ಯರು, ಗ್ರಾ. ಪಂ. ಮಾಜಿ ಸದಸ್ಯ ಕುಮಾರ ಪಟಗಾರ ಸೇರಿದಂತೆ ಗ್ರಾಮಸ್ಥರನೇಕರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

RELATED ARTICLES  ಸಮಾಜದ ಸರ್ವತೋಮುಖ ಪ್ರಗತಿಗೆ ಶಿಕ್ಷಣ ಅವಶ್ಯಕ: ಭಾಸ್ಕರ್ ನಾಯಕ್