ಶ್ರೀ ಅಖಿಲ ಹವ್ಯಕ ಮಹಾಸಭೆಯ ನೇತೃತ್ವದಲ್ಲಿ ಉಚಿತ ವೈದ್ಯಕೀಯ  ಶಿಬಿರವು 30.07.2023 ಭಾನುವಾರ ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆಯಲಿದೆ.

ಮಾಜಿ ಸಚಿವರು ಹಾಗೂ ಶಾಸಕರಾದ ಡಾ. ಸಿ.ಎನ್ ಅಶ್ವಥ್ ನಾರಾಯಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮ ಬೆಳಗ್ಗೆ 9.30ಕ್ಕೆ ನಡೆಯಲಿದೆ. ಅನೇಕ ಖ್ಯಾತ ವೈದ್ಯರು ಶಿಬಿರದಲ್ಲಿ ಪಾಲ್ಗೊಂಡು ಉಚಿತ ಸಲಹೆ ಹಾಗೂ ಚಿಕಿತ್ಸೆ ನೀಡಲಿದ್ದಾರೆ.

RELATED ARTICLES  ಭಟ್ಕಳ ತಾಲೂಕಾ‌ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕ/ಶಿಕ್ಷಕಿ ಹಾಗೂ ಉಪನ್ಯಾಸಕರುಗಳಿಗೆ ಕವನ ರಚನಾ ಸ್ಪರ್ಧೆ.

ಶ್ರೀಭಾರತೀ ಆರೋಗ್ಯಧಾಮ, ಕರ್ನಾಟಕ ಕ್ಯಾನ್ಸರ್ ಸೊಸೈಟಿ, ಸುನೇತ್ರ  ಕಣ್ಣಿನ ಆಸ್ಪತ್ರೆ, ಶ್ರೀ ರಕ್ಷಾ ಲ್ಯಾಬ್ಸ್, ಹಾಗೂ ಆಸ್ಟರ್ ಆರ್.ವಿ ಆಸ್ಪತ್ರೆಗಳ ಸಹಯೋಗದೊಂದಿಗೆ ವೈದ್ಯಕೀಯ ಶಿಬಿರ ನಡೆಯಲಿದ್ದು, ಶಿಬಿರದಲ್ಲಿ ಎಲ್ಲ ರೀತಿಯ ರೋಗಗಳಿಗೆ ಉಚಿತ ಸಲಹೆ, ಚಿಕಿತ್ಸೆ ನೀಡಲಾಗುವುದು. ರಕ್ತದ ಪರೀಕ್ಷೆ, ಸಕ್ಕರೆ
ಕಾಯಿಲೆ, Echo Scan, ECG, BP,  ಕಣ್ಣು, ಕಿವಿ ಮೂಗು ಗಂಟಲು ಬೇನೆ, ಕ್ಯಾನ್ಸರ್, Thyroid, ಸಂದಿವಾತ, ಮುಟ್ಟಿನ ತೊಂದರೆ, ಚರ್ಮ ಕಾಯಿಲೆ, ದಮ್ಮು,ಕೆಮ್ಮು, ಅಲರ್ಜಿ ಮುಂತಾದವುಗಳನ್ನು ಪರೀಕ್ಷಿಸಲಾಗುತ್ತದೆ.

RELATED ARTICLES  ನಾಗಸಹಿತಳಾದ ಶ್ರೀ ದೇವಿಯ ದಿವ್ಯ ಸನ್ನಿಧಿಯಲ್ಲಿ ವಾರ್ಷಿಕ ವರ್ಧಂತಿ ಹಾಗೂ ಶತಚಂಡಿಕಾ ಯಾಗ. 

ಸಾರ್ವಜನಿಕರಿಗೆ ಈ ಶಿಬಿರದಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿದ್ದು, ಎಲ್ಲಾ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಹವ್ಯಕ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಚಾಲಕರಾದ ಡಾ.ಶ್ರೀಪಾದ ಹೆಗಡೆಯವರನ್ನು (94480 18654) ಹಾಗೂ ಮಹಾಸಭೆಯ ಕಾರ್ಯಾಲಯವನ್ನು (080-2334 8193) ಸಂಪರ್ಕಿಸಬಹುದು.