ಕುಮಟಾ: ಇಲ್ಲಿಯ ಚಿತ್ರಿಗಿ ವಿಷ್ಣುತೀರ್ಥದಲ್ಲಿ ತಾಲೂಕಾ ಮಟ್ಟದ ಈಜು ಸ್ಪರ್ಧೆಯನ್ನು ರೋಟರಿ ಕ್ಲಬ್ ಕುಮಟಾ ಮತ್ತು ಮೋಹನ ಕೆ. ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿತ್ತು. ಈ ಭಾಗದ ಈಜುಗಾರರು ರಾಜ್ಯಮಟ್ಟದಲ್ಲಿ ಮಿಂಚಬೇಕೆAಬ ದೂರದೃಷ್ಠಿತ್ವ ಹೊಂದಿದ್ದ ತಮ್ಮ ತಂದೆ ಮೋಹನ ಕೆ. ಶೆಟ್ಟಿಯವರು, ರೋಟರಿ ಸಹಯೋಗದೊಂದಿಗೆ ಹಾಕಿಕೊಟ್ಟ ಈಜು ಸ್ಪರ್ಧೆ ಈವತ್ತಿಗೂ ಮುಂದುವರಿದಿದ್ದು ವಿದ್ಯಾರ್ಥಿ ಹಾಗೂ ಪೋಷಕರ ಕ್ರೀಡಾ ಸ್ಫೂರ್ತಿಗೆ ಸಾಕ್ಷಿಯಾಗಿದೆ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಈಜುವಿಕೆ ನೆರವಾಗುತ್ತಿದೆಯೆಂದು ಮೋಹನ ಕೆ. ಶೆಟ್ಟಿ ಟ್ರಸ್ಟ್ನ ಉಪಾಧ್ಯಕ್ಷ ರವಿಕುಮಾರ ಮೋಹನ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಂದುವರಿದು ಇಂದಿನ ಮೊಬೈಲ್ ಯುಗದಲ್ಲಿ ಯುವಜನರಲ್ಲಿ ದೈಹಿಕ ಕ್ರೀಡಾ ಪ್ರೇಮ ಜಾಗೃತವಾಗಬೇಕಾಗಿದೆ ಎಂದರಲ್ಲದೇ, ಕೇವಲ ವ್ಹಾಲಿಬಾಲ್ ಮತ್ತು ಕ್ರಿಕೆಟ್ ಮಾತ್ರ ಕ್ರೀಡೆಯಲ್ಲ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸಿಎಫ್ ಲೋಹಿತ್ ಜಿ. ರೋಟರಿ ಸಂಸ್ಥೆ ಈಜು ಸ್ಪರ್ಧೆಯನ್ನು ಸುವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿರುವುದನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.

ರೋಟರಿ ಅಧ್ಯಕ್ಷ ಎನ್.ಆರ್.ಗಜು ಸ್ವಾಗತಿಸುತ್ತಾ, ವಿಷ್ಣು ತೀರ್ಥ ಈಜುಪಟುಗಳನ್ನು ತಯಾರುಮಾಡುವಲ್ಲಿ ಸಾರ್ವಜನಿಕವಾಗಿ ದೊಡ್ಡದೇ ಕೊಡುಗೆ ನೀಡುತ್ತಾ ಬಂದಿದೆ ಎಂದರು. ಕಾರ್ಯಕ್ರಮದ ಸಂಯೋಜಕ ಕಿರಣ ನಾಯಕ, ಸಂದೀಪ ನಾಯಕ, ಸತೀಶ ನಾಯ್ಕ, ಸುರೇಶ ಭಟ್, ಚೇತನ್ ಶೇಟ್, ಅತುಲ್ ಕಾಮತ, ಜಯಶ್ರೀ ಕಾಮತ, ಪವನ ಶೆಟ್ಟಿ, ಹರೀಶ್ ಹೆಗಡೆ, ಡಾ. ಸಚಿನ್ ನಾಯಕ, ಡಾ. ಆಜ್ಞಾ ನಾಯಕ, ಎಸ್.ಕೆ.ಹೆಗಡೆ, ವಸಂತ ಶಾನಭಾಗ, ಡಾ. ವನಮಾಲಾ ಶಾನಭಾಗ, ನಿಖಿಲ್ ಕ್ಷೇತ್ರಪಾಲ, ಗಣೇಶ್ ನಾಯ್ಕ, ವಿನಯ್ ನಾಯಕ ಮೊದಲಾದವರು ಸಹಕರಿಸಿದರು. ಗಣಪತಿ ಸಿ. ಪಟಗಾರ ಮುಖ್ಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ವಿನಾಯಕ ಬಾಳೇರಿ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ರಾಮದಾಸ ಗುನಗಿ ವಂದಿಸಿದರು. ಸ್ಪರ್ಧಾ ಕಾರ್ಯಕ್ರಮದಲ್ಲಿ ರೋಟರಿ, ರೋರ‍್ಯಾಕ್ಟ್ ಕ್ಲಬ್‌ನ ಸದಸ್ಯರು ಕ್ರೀಡಾಪ್ರೇಮಿಗಳು ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಆರೋಗ್ಯ, ಆರಕ್ಷಕ ಇಲಾಖೆಯವರು ಉಪಸ್ಥಿತರಿದ್ದರು.
ಸ್ಪರ್ಧಾ ವಿಜೇತರು: ಕಿರಿಯ ಪ್ರಾಥಮಿಕ ಬಾಲಕರು: ನಮನ ಯು. ಹರಿಕಾಂತ, ಸರಸ್ವತಿ ವಿದ್ಯಾಕೇಂದ್ರ ಪ್ರಥಮ, ಸುಬ್ರಹ್ಮಣ್ಯ ಎ. ಶಾಸ್ತ್ರೀ, ದ್ವಿತೀಯ, ಸೌರ್ಯ ಎಸ್. ಹಾಗೂ ಆದಿತ್ಯ ಎನ್. ಭಂಡಾರಿ, ಸರಸ್ವತಿ ವಿದ್ಯಾಕೇಂದ್ರ ತೃತೀಯ. ಬಾಲಕಿಯರು: ತಾನ್ವಿ ಎಸ್.ಪಟಗಾರ, ಎಚ್ಪಿಎಸ್ ಚಿತ್ರಿಗಿ ಪ್ರಥಮ, ಅದಿತಿ ಗೋಕರ್ಣ, ಬಿಜಿಎಸ್ ಮಿರ್ಜಾನ್ ದ್ವೀತಿಯ, ಲಹರಿ ಪಟಗಾರ ಸರಸ್ವತಿ ವಿದ್ಯಾಕೇಂದ್ರ ತೃತೀಯ. ಹಿರಿಯ ಪ್ರಾಥಮಿಕ ಬಾಲಕರು: ಅರ್ಜುನ್ ಎ. ಶಾನಭಾಗ, ಸರಸ್ವತಿ ವಿದ್ಯಾಕೇಂದ್ರ ಪ್ರಥಮ, ಅನ್ಮೋಲ್ ಎಸ್. ನಾಯ್ಕ, ದ್ವೀತಿಯ, ವಿಷ್ಣು ಅತುಲ್ ಕಾಮತ, ಎವಿಬಿ ತೃತೀಯ. ಬಾಲಕಿಯರು: ಶುಭಾಂಗಿ ಮಂಕೀಕರ, ಬಿಜಿಎಸ್ ಮಿರ್ಜಾನ್, ಪ್ರಥಮ, ದೃಷ್ಠಿ ಬಾಳಗಿ ಸರಸ್ವತಿ ವಿದ್ಯಾಕೇಂದ್ರ, ದ್ವಿತೀಯ, ರೀಷಾ ನಾಯಕ, ನಿರ್ಮಲಾ ಕಾನ್ವೆಂಟ್ ತೃತೀಯ. ಪ್ರೌಢಶಾಲಾ ಬಾಲಕರು: ಸುಯೋಗ ದಾಮೋದರ ಶೆಟ್ಟಿ, ಸಿವಿಎಸ್‌ಕೆ ಪ್ರಥಮ, ಕಾರ್ತಿಕ ಗಣಪತಿ ವೆಂಗೂರ್ಲೆಕರ ಸಿ.ವಿ.ಎಸ್.ಕೆ. ದ್ವಿತೀಯ, ಈಶಾನ್ ರವೀಂದ್ರ ನಾಯ್ಕ., ಸಿವಿಎಸ್‌ಕೆ. ತೃತೀಯ. ಬಾಲಕಿಯರು: ಶ್ರದ್ಧಾ ವೆರ್ಣೇಕರ, ಸಿವಿಎಸ್‌ಕೆ ಪ್ರಥಮ, ಪೂರ್ವಿ ಶಾನಭಾಗ ಸಿವಿಎಸ್‌ಕೆ ದ್ವಿತೀಯ, ಆಧ್ಯಾ ಲೋಹಿತ, ತೃತೀಯ, ಕಾಲೇಜು ವಿಭಾಗ: ಬಾಲಕರು ಸ್ವಯಂ ಪೈ, ಸರಸ್ವತಿ ಪಿಯು ಪ್ರಥಮ, ರಾಘವೇಂದ್ರ ನಾಯ್ಕ ಸರಸ್ವತಿ ಪಿಯು ದ್ವಿತೀಯ, ಕೃಷ್ಣ ಡಿ.ಎಚ್. ಎ.ವಿ.ಬಿ ತೃತೀಯ ಬಾಲಕಿಯರು: ಪ್ರಥಮ: ಅಕ್ಷತಾ ದೇಶಭಂಡಾರಿ ಸರಸ್ವತಿ ಪಿಯು, ದ್ವಿತೀಯ: ಶ್ರೇಯಾ ಆರ್. ನಾಯ್ಕ, ಸರಸ್ವತಿ ಪಿಯು, ತೃತೀಯ: ಶರಧಿ ದಿವಾನ ಎವಿಬಿ, ೪೦-೬೦ ಸಾರ್ವಜನಿಕರು: ಗಣೇಶ ಬಾಳಗಿ ಪ್ರಥಮ, ಸದಾನಂದ ಹರಿಕಂತ್ರ ದ್ವಿತೀಯ, ಧರ್ಮೇಂದ್ರ ನಾಯ್ಕ, ತೃತೀಯ ೪೦ ವರ್ಷದ ಕೆಳಗಿನವರು: ಕರುಣ ಬಿ. ಹರಿಕಾಂತ, ಪ್ರಥಮ, ಕೃಷ್ಣ ಧಾರೇಶ್ವರ ದ್ವಿತೀಯ, ಪೃಥ್ವಿರಾಜ್ ನಾಯ್ಕ ತೃತೀಯ ಮಹಿಳೆಯರ ಮುಕ್ತ ಸ್ಪರ್ಧೆ: ಸ್ವಾತಿ ಪೈ ಪ್ರಥಮ, ಶಿಫಾಲಿ ಕಾಮತ ದ್ವಿತೀಯ, ಪಲ್ಲವಿ ಪ್ರಭು ಮತ್ತು ಪಲ್ಲವಿ ಶೆಟ್ಟಿ ತೃತೀಯ ಸ್ಥಾನ ಹಂಚಿಕೊಂಡರು.

RELATED ARTICLES  ಕುಮಟಾದಲ್ಲಿ ಡಬಲ್ ಮರ್ಡರ್..!

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ರವಿಕುಮಾರ ಮೋಹನ ಶೆಟ್ಟಿ, ರೋಟರಿ ಅಧ್ಯಕ್ಷ ಎನ್.ಆರ್.ಗಜು, ಎಸಿಪಿ ಲೋಹಿತ್ ಜಿ. ಕಾರ್ಯದರ್ಶಿ ರಾಮದಾಸ ಗುನಗಿ, ಕೋಶಾಧ್ಯಕ್ಷ ಸಂದೀಪ ನಾಯಕ, ಚೇತನ ಶೇಟ್, ಡಾ. ದೀಪಕ ಡಿ. ನಾಯಕ, ವಿನಾಯಕ ಬಾಳೇರಿ, ಸುರೇಶ್ ಭಟ್, ಸತೀಶ್ ನಾಯ್ಕ, ನಿರ್ಣಾಯಕರಾದ ಗಣಪತಿ ಪಟಗಾರ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES  ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು.