ಕಾರವಾರ – ಕನ್ನಡ ಚಲನಚಿತ್ರದ ಹೆಸರಾಂತ ನಿರ್ದೇಶಕ ಅಬ್ಬಯ್ಯ ನಾಯ್ಡು ಪುತ್ರ ಶ್ರೇಷ್ಠ ಚಿತ್ರನಟ ಲೋಕೇಶ ಅವರ ಸ್ಮರಣಾರ್ಥ ವಿಶ್ವ ಕನ್ನಡ ಕಲಾ ಸಂಸ್ಥೆ ಬೆಂಗಳೂರು ಇವರು ಕೊಡಮಾಡುವ ೨೦೨೩ ನೇ ಸಾಲಿನ ರಾಜ್ಯ ಪ್ರಶಸ್ತಿಗೆ ಉಮೇಶ ಮುಂಡಳ್ಳಿ ಅವರ ಹೆಸರು ಘೋಷಣೆಯಾಗಿರುತ್ತದೆ. ಸುಗಮ ಸಂಗೀತ,ಜನಪದ ಸಂಗೀತ ಹಾಗೂ ಸ್ವರ ಸಂಯೋಜನೆ ಕಾರ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿರುವ ಇವರ ಪ್ರತಿಭೆಯನ್ನು ಗುರುತಿಸಿ ವಿಶ್ವ ಕನ್ನಡ ಕಲಾ ಸಂಸ್ಥೆಯು ಚಿತ್ರನಟ ಲೋಕೇಶ ಸ್ಮರಣಾರ್ಥ ರಾಜ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಅಗಸ್ಟ್ ೨೦ ರವಿವಾರದಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇವರೊಂದಿಗೆ ಇನ್ನೂ ಹಲವರಿಗೆ ಬೇರೆ ಬೇರೆ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗೆ ಪ್ರಶಸ್ತಿ ನೀಡಲಾಗುವುದು ಎಂದು ವಿಶ್ವ ಕನ್ನಡ ಕಲಾ ಸಂಸ್ಥೆ ಇದರ ಸಂಸ್ಥಾಪಕ ಅಧ್ಯಕ್ಷರಾದ ಡಾ.ಈ. ರವೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

RELATED ARTICLES  ಕುಮಟಾದಲ್ಲಿ ನಿಲ್ಲದ ಕೊರೋನಾ ಅಬ್ಬರ


ಸುಗಮಸಂಗೀತ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಮುಂಡಳ್ಳಿ ಯವರು ೨೦೦೧ ರಿಂದ ಸತತವಾಗಿ ಯುವಜನ ಮೇಳ,ಯುವಜನ ಉತ್ಸವದಲ್ಲಿ ತೊಡಗಿಸಿಕೊಂಡು ಭಾವಗೀತೆ,ರಂಗಗೀತೆ,ಜಾನಪದ,ಗೀಗಿಪದ ಲಾವಣಿಪದ ತತ್ವಪದಗಳು ದಾಸರಪದಗಳ ಮೂಲಕ ಜಿಲ್ಲೆ ಹಾಗೂ ರಾಜ್ಯಾದ್ಯಂತ ಭಾಗವಹಿಸುವ ಮೂಲಕ ಮನೆಮಾತಾಗಿದ್ದರು. ಉದಯಟಿವಿ, ಚಂದನ ದೂರದರ್ಶನದಲ್ಲಿ ದಾರವಾಡ ಆಕಾಶವಾಣಿಯಲ್ಲಿ ಅನೇಕ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮುಂಡಳ್ಳಿಯವರು ತಮ್ಮದೇ ರಚನೆಯ ಸಾಹಿತ್ಯವಿರುವ ಎಂಟು ಭಾವಗೀತೆಗಳ “ಭರವಸೆಯ ಛಾಯೆ “ಎಂಬ ಧ್ವನಿಸುರುಳಿಯನ್ನು ೨೦೧೧ ರಲ್ಲಿಯೇ ನಾಡೋಜ ಪಾಟಿಲ್ ಪುಟ್ಟಪ್ಪ ನವರ ಅಮೃತ ಹಸ್ತದಲ್ಲಿ ಬಿಡುಗಡೆ ಗೊಳಿಸಿರುವುದು ಇವರ ಸಂಗೀತ ಸಾಧನೆಯ ಮೈಲಿಗಲ್ಲು, ಇತ್ತೀಚಿಗೆ ಕೆಲವು ಸ್ವರಚಿತ ಭಾವಗೀತೆಗಳು ಭಕ್ತಿಗೀತೆಗಳ ಅಲ್ಬಂ ಗಳನ್ನು ಮತ್ತೆ ಹೊರತರುವ ಮೂಲಕ ಯೂಟ್ಯೂಬ್ ವೀಕ್ಷಕರ ಮೆಚ್ಚುಗೆ ಗಳಿಸಿರುತ್ತಾರೆ. ಕಳೆದ ಕೆಲವು ವರ್ಷಗಳಿಂದ ಸರ್ಕಾರದ ಕೆಲವು ಯೋಜನೆಗಳ ಯಶಸ್ಸಿ ಅನುಷ್ಠಾನದಲ್ಲಿ ಮಾಹಿತಿ ಸಂವಹನದ ಸಾಹಿತ್ಯ ,ಗೀತೆಗಳ ರಚನೆಯಲ್ಲಿಯೂ ತೊಡಗಿಕೊಂಡಿರುತ್ತಾರೆ. ೨೦೧೬ ರಲ್ಲಿ ತಮ್ಮದೆ ಆದಂತಹ ನಿನಾದ ಸಂಘಟನೆಯ ಮೂಲಕ ಜಿಲ್ಲೆ ಹಾಗೂ ರಾಜ್ಯದ ಹಲವಾರು ಕಡೆ ಅಲ್ಲದೆ ಹೊರ ರಾಜ್ಯಗಳಲ್ಲಿಯೂ ಸುಗಮಸಂಗೀತ ಹಾಗೂ ಭಕ್ತಿಸಂಗೀತ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿರುವ ಇವರು ಭಾವಕವಿ ಎಂದೆ ಕರೆಸಿಕೊಂಡಿದ್ದಾರೆ.

RELATED ARTICLES  ಪತ್ರಕರ್ತ ರವೀಂದ್ರ ಭಟ್ ಇನ್ನಿಲ್ಲ


ಭಟ್ಕಳ ತಾಲೂಕಿನ ೮ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವಕ್ಕೂ ಪಾತ್ರರಾಗಿರುವ ಉಮೇಶ ಮುಂಡಳ್ಳಿ ಯವರಿಗೆ ಈಗಾಗಲೇ ಯುವಜನ ಸೇವಾ ಇಲಾಖೆಯಿಂದ ಯುವ ಪ್ರಶಸ್ತಿ, ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ , ಬಸವ ಚೇತನ ಪ್ರಶಸ್ತಿ , ಕರುನಾಡ ಸಾದಕ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ರತ್ನ ,ನ್ಯಾಶನಲ್ ಐಕಾನ್ ಅವಾರ್ಡ್ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.