ಹೊನ್ನಾವರ: ಗೇರುಸೊಪ್ಪ ವನ್ನು ರಾಜಧಾನಿಯಾಗಿಟ್ಟುಕೊಂಡು 50 ವರ್ಷಗಳಿಗೂ ಹೆಚ್ಚು ಕಾಲ ಉತ್ತರ ಕನ್ನಡ ಜಿಲ್ಲೆ ಮತ್ತು ಮಲೆನಾಡು ಭಾಗವನ್ನು ಆಳಿದ ರಾಣಿ ಚೆನ್ನಭೈರಾದೇವಿಯವರ ಹೆಸರಿನ ಥೀಮ್ ಪಾರ್ಕ್ ಸ್ಥಾಪನೆಗೆ ಹೊನ್ನಾವರ ಕಾಸರಕೋಡಿನ2ಎಕರೆ ಭೂಮಿ ಬಿಡುಗಡೆಮಾಡಲು ಇರುವ ಅಡೆತಡೆಗಳನ್ನು ನಿವಾರಿಸಿಕೊಡಬೇಕೆಂದು ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ಚಂದ್ರಕಾಂತ ಕೊಚರೇಕರ ಅವರು ಮುಖ್ಯಮಂತ್ರಿ, ಅರಣ್ಯ ಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾರ್ವಜನಿಕರ ಪರವಾಗಿ ಪತ್ರ ಬರೆದು ಒತ್ತಾಯಿಸಿದ್ದಾರೆ.

RELATED ARTICLES  ಸದ್ದಿಲ್ಲದೇ ಹರಡುತ್ತಿದೆ ಉತ್ತರ ಕನ್ನಡದಲ್ಲಿ ಇಲಿ ಜ್ವರ! ಮೂವರ ಪ್ರಾಣ ಪಡೆಯಿತೇ ಈ ‘ಲೆಪ್ಟೋಸ್ಪೆರೊಸಿಸ್’?

ಹೊನ್ನಾವರ ತಾಲೂಕಿನ ಇಕೋ ಬೀಚ್, ಕಾಂಡ್ಲಾವನ, ಅಪ್ಸರಕೊಂಡ, ಇಡಗುಂಜಿ ಪವಿತ್ರವನ ಹಾಗೂ ಶರಾವತಿ ಹಿನ್ನೀರಿನ ಪ್ರದೇಶವು ಈಗಾಗಲೇ ರಾಜ್ಯದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಕೋ ಬೀಚ್ ಮತ್ತು ಕಾಂಡ್ಲಾವನದ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ 2ಎಕರೆ ಪ್ರದೇಶದಲ್ಲಿ ಚೆನ್ನಭೈರಾದೇವಿ ಥೀಮ್ ಪಾರ್ಕ್ ಸ್ಥಾಪನೆಗೆ ಹಿಂದಿನ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿ, ಆಯ-ವ್ಯಯದಲ್ಲಿ ಸೇರಿಸಿತ್ತು.
ಕಾರಣಾಂತರಗಳಿಂದ ಅಡೆತಡೆ ಉಂಟಾಗಿದೆ. ರಾಣಿ ಚೆನ್ನಭೈರಾದೇವಿಯು ಸರ್ವ ಧರ್ಮ ಸಮನ್ವಯ ಸಾಧಿಸಿದ್ದಳು. ಕಾಳುಮೆಣಸು ರಪ್ತು ಮಾಡಿ ವಿದೇಶದಲ್ಲಿ ಖ್ಯಾತಿ ಗಳಿಸಿದ್ದಳು. ಪೋರ್ಚುಗೀಸರನ್ನು ಯುಧ್ಧದಲ್ಲಿ ಸೋಲಿಸಿದ್ದಳು. ಇಂತಹವರನ್ನು ರಾಜ್ಯ ಮರೆಯಬಾರದು. ರಾಣಿ ಚೆನ್ನಭೈರಾದೇವಿಯ ಕ್ಷೇತ್ರವಾದ ಹೊನ್ನಾವರದಲ್ಲಿ ಸರ್ಕಾರದ ಸಹಕಾರದೊಂದಿಗೆ ಥೀಮ್ ಪಾರ್ಕ್ ಸ್ಥಾಪನೆ ಮಾಡುವ ಸ್ಥಳೀಯ ಸಮೀತಿಯ ನಿರ್ಧಾರವು ಈಗ ಐತಿಹಾಸಿಕ ಮಹತ್ವ ಪಡೆದಿದೆ.

RELATED ARTICLES  ದಿನಕರ ಶೆಟ್ಟಿಯವರ ಪರ ಅಬ್ಬರದ ಪ್ರಚಾರಕ್ಕಿಳಿದ ವಿನಾಯಕ ನಾಯ್ಕ

ಇದು ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ. ಆದ್ದರಿಂದ ಈ ಸಂಬಂಧದ ಕಡತಕ್ಕೆ ಅನುಮೋದನೆ ಕೊಡಿಸಿ
ಹೊನ್ನಾವರದ ಕಾಸರಕೋಡಿನಲ್ಲಿ ಥೀಮ್ ಪಾರ್ಕ್ ರಚನೆಗೆ ಅವಕಾಶ ಮಾಡಿಕೊಡಬೇಕೆಂದು ಕೊಚರೇಕರ ತಮ್ಮ ಪತ್ರದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.