ಯಲ್ಲಾಪುರ : ಯಲ್ಲಾಪುರ ಪಟ್ಟಣದ ಹೊರವಲಯದ ಕೆ.ಮಿಲನ್ ಹೊಟೇಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದ ಟ್ರಕ್ ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಈ ಅಪಘಾತದಲ್ಲಿ ಅರಬೈಲ್ ಗ್ರಾಮದ
ವಾಸುದೇವ ಸಿದ್ದಿ (35)ಸ್ಥಳದಲ್ಲೇ ಮೃತಪಟ್ಟಿದ್ದು,
ಬೈಕ್ ಜಕಂಗೊಂಡಿವೆ. ಆರೋಪಿ ಟ್ರಕ್ ಚಾಲಕ
ಜ್ಞಾನೇಶ್ವರ ಡೋರಗಳ್ಳಿ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಟ್ರಕ್ಕನ್ನು ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಕೊಂಡು ಬಂದು ಮುಂದೆ ಹೋಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡ ಟ್ರಕ್ ಎದುರಿನಿಂದ ಬರುತ್ತಿದ್ದ
ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ಮೇಲೆ ಟ್ರಕ್ ಹರಿದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

RELATED ARTICLES  ಜಿಲ್ಲೆಯಾದ್ಯಂತ ಸ್ವರ ಸಿಂಚನ ಮಾಡಿದ ಪುಣ್ಯಪುರುಷರ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತಿರುವದು ಶ್ಲಾಘನೀಯವಾಗಿದೆ : ಪಂ.ದಿನಕರ ಪನ್ಸಿಕರ್

ಸಿಪಿಐ ರಂಗನಾಥ ನೀಲಮ್ಮನವರ್ ಹಾಗೂ ಪಿಎಸ್ಪಿ ರವಿ ಗುಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತಾಗಿ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಆಮ್ ಆದಮಿ ಪಾರ್ಟಿ (ಆಪ್) ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರಾಧ್ಯಕ್ಷರನ್ನಾಗಿ ಭಟ್ಕಳದ ಅಬ್ದುಲ್ ನಾಶೀರ್ ಶೈಖ್ ಆಯ್ಕೆ