ಕುಮಟಾ ; ಇಂದು ಬ್ರಾಹ್ಮಣ ಸಮುದಾಯವನ್ನು ಹೀಯಾಳಿಸುವುದು ಒಂದು ಪ್ಯಾಷನ್ ಆಗಿದೆ. ಅದಕ್ಕೆ ಕಾರಣ ನಮ್ಮ ಸಂಘಟನೆ ಬಲಿಷ್ಠವಾಗಿಲ್ಲದಿರುವುದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಡಾ.ಜಿ.ಎಲ್.ಹೆಗಡೆಯವರು ಅಭಿಪ್ರಾಯಪಟ್ಟರು. ತಾಲೂಕಿನ ಹೆಗಡೆಯ ಗೋಪಾಲಕೃಷ್ಣ ದೇವಾಲಯದಲ್ಲಿ ನಡೆಯುತ್ತಿರುವ ಚತುರ್ವೇದ ಸ್ವಾಹಾಕಾರ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ ಸಾಧಕರಿಗೆ ಪುರಸ್ಕಾರ ಕಾರ್ಯಕ್ರಮದಲ್ಲಿ ಶಿಕ್ಷಣ, ಕ್ರೀಡೆ ಹಾಗೂ ಪಾಕಶಾಸ್ತ್ರದಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಸನ್ಮಾನಿಸಿ ಅವರು ಮಾತನಾಡಿದರು.

    ನಮ್ಮ ಸಂಘಟನೆ ಬಲಿಷ್ಠವಾಗಿಲ್ಲದಿರುವುದು ನಮ್ಮ ಹಿನ್ನಡೆಗೆ ಕಾರಣ, ಸಂಘಟಿತರಾಗಿದ್ದರೆ ಅಸಾಧ್ಯವನ್ನೂ ಸಾಧ್ಯವಾಗಿಸಲು ಸಾಧ್ಯ. ನಮ್ಮೆಲ್ಲಾ ಮನಸ್ತಾಪಗಳನ್ನು ಬದಿಗಿಟ್ಟು ಸಂಘಟಿತರಾಗುವ ಇಂದಿನ ಅನಿವಾರ್ಯತೆಯನ್ನು ಮನಗಂಡು ಒಂದಾಗಿ. ವಿಪ್ರ ಒಕ್ಕೂಟ ಹೆಗಡೆಯ ಕಾರ್ಯಚಟುವಟಿಕೆಗಳು ನಿಮ್ಮೆಲ್ಲರಿಗೆ ಪ್ರೇರಣೆಯಾಗಲಿ” ಎಂದರು. 

RELATED ARTICLES  ಬಾವಿಯಲ್ಲಿ ಬಿದ್ದ ಜಿಂಕೆಯ ರಕ್ಷಣೆ.

    ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷರಾದ ಡಾ. ಯು.ಜಿ.ಶಾಸ್ತ್ರೀ ವಿಪ್ರ ಒಕ್ಕೂಟ ಹೆಗಡೆಯ ವತಿಯಿಂದ ಕಳೆದ ಹತ್ತು ವರ್ಷಗಳಲ್ಲಿ ಕೈಗೊಂಡ ಸಮಾಜಮುಖಿ ಕಾರ್ಯಗಳ ಮಾಹಿತಿ ಒದಗಿಸಿ ಸರ್ವರ ಸಹಕಾರ ಕೋರಿದರು. ಚತುರ್ವೇದ ಸ್ವಾಹಾಕಾರದ ಮಹತ್ವ ಈ ಕಾರ್ಯಕ್ರಮದ ಉದ್ದೇಶಗಳ ಕುರಿತು ಮಾತನಾಡಿ ಇದೊಂದು ಅಪರೂಪದ ಧಾರ್ಮಿಕ ಕಾರ್ಯಕ್ರಮವಾಗಿದ್ದು ಇದನ್ನು ಸಂಘಟಿಸುವ ಮೂಲಕ ವಿಪ್ರ ಒಕ್ಕೂಡ ಹೆಗಡೆಯವರು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಇಲ್ಲಿಯವರೆಗಿನ ವ್ಯವಸ್ಥೆಯನ್ನು ನೋಡಿದರೆ ಅವರು ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ವೇದದ ಆಳ ಅಗಲಗಳನ್ನು ಅಳೆಯಲು ಸಾಧ್ಯವಿಲ್ಲ. ಅಷ್ಟೊಂದು ಅಗಾಧತೆ ಅದರಲ್ಲಿದೆ ಎಂದರು.

    ಶಿಕ್ಷಣ ಕ್ಷೇತ್ರದಲ್ಲಿ ನರಸಿಂಹ ಭಾಗ್ವತ, ಪ್ರಮೋದ ಹೆಗಡೆ, ಕುಸುಮಾ ಹೆಗಡೆ, ಕ್ರೀಡಾ ಕ್ಷೇತ್ರದಲ್ಲಿ ಅರುಣ ಭಟ್ಟ ಕಾಶಿ, ಪ್ರಮೋದ ದತ್ತಾತ್ರೇಯ ಹೆಗಡೆ ಪಾಕತಜ್ಞರಾದ ಶಂಕರ ಹೆಗಡೆ, ಚಿದಂಬರ ಹೆಗಡೆ, ಅರುಣ ಭಾಗ್ವತ, ನಾಗರತ್ನಾ ಭಾಗ್ವತ, ಉಮೇಶ ಹೆಗಡೆ, ಗಜಾನನ ಹೆಗಡೆ, ವಿಷ್ಣು ಭಟ್ಟ, ರಮೇಶ ಭಟ್ಟ, ಶ್ರೀಮತಿ ಭಟ್ಟ ಇವರನ್ನು ಸನ್ಮಾನಿಸಲಾಯಿತು.

RELATED ARTICLES  ಶ್ರೀ ಶಂಭುಲಿಂಗೇಶ್ವರ ದೇವಾಲಯ, ಕಳಿಮಠ ಹೆರಂಗಡಿ ಗ್ರಾಮ, ತಾ|| ಹೊನ್ನಾವರ ಇದರ ಪುನರ್ ಪ್ರತಿಷ್ಠಾಪನಾ ಮಹೋತ್ಸವ

    ಯಜುರ್ವೇದ ಸ್ವಾಹಾಕಾರವನ್ನು ನಡೆಸಿಕೊಡುತ್ತಿರುವ ವಿದ್ವಾನ್ ಗಜಾನನ ಭಟ್ಟ, ಹರೀಶ ಭಟ್ಟ, ಮಂಜುನಾಥ ಭಟ್ಟ ರವರಿಗೆ ಗೌರವಾರ್ಪಣೆ ಮಾಡಲಾಯಿತು. ವೈದಿಕರು ವೇದಘೋಷ ನಡೆಸಿಕೊಟ್ಟರು. ಡಾ.ಗೋಪಾಲಕೃಷ್ಣ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ರವೀಂದ್ರ ಭಟ್ಟ ಸೂರಿ ಕಾರ್ಯಕ್ರಮ ನಿರೂಪಿಸಿದರು. ಸುಧಾ ಶಾಸ್ತ್ರಿ ವಂದಿಸಿದರು. ಮಂಜುನಾಥ ಹೆಗಡೆ, ರಾಘವೇಂದ್ರ ಮಾನೀರ, ಪಿ.ಆರ್.ಹೆಗಡೆ ಸಹಕರಿಸಿದರು.