ರೆಸಿಪಿ ಹೆಸರು ನೋಡಿ ಆಶ್ಚರ್ಯ ಆಯ್ತಾ ಸದಸ್ಯರೆ?!

ನಲವತ್ತು ದಾಟಿದ ಮಹಿಳೆಯರಲ್ಲಿ ಮೊಣ ಕಾಲು ನೋವು ಬಹಳ ಸಾಮಾನ್ಯ! ಋತುಬಂಧ (Menopause) ಆದ ಮೇಲೆ ಮಹಿಳೆಯರ ತೂಕ ಹೆಚ್ಚುತ್ತಾ ಹೋಗುತ್ತದೆ! ಜೊತೆಯಲ್ಲಿ ಮೊಣ ಕಾಲು, ಮುಂಗಾಲು ನೋವು ಸೇರಿ ಕೊಳ್ಳುತ್ತದೆ! ಪ್ರತಿದಿನ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವವರು ಎಷ್ಟೋ ಜನ!

ಈ ರೆಸಿಪಿ ನನಗೆ ನಮ್ಮ ಆಂಟಿ ಕೊಟ್ಟಿದ್ದು. ನಾನು ಕೂಡ ಈ ನೋವು ತುಂಬಾ ಅನುಭವಿಸಿದ್ದೇನೆ! ನನಗೆ ಸಂಧಿವಾತ ( Rheumatism) ಕಾಯಿಲೆ ಇದೆ! ಅಂದರೆ Joints pain! ಬೆಳಗ್ಗೆ ಎದ್ದೊಡನೆ ಕೈ ಬೆರಳು, ಮುಂಗಾಲಲ್ಲಿ ( Ankle) ನೋವು ಇರುತ್ತದೆ. ದಿನದ ಕೆಲಸ ಮಾಡಿಕೊಳ್ಳಲು, ತರಕಾರಿ ಹೆಚ್ಚಲು ಸಹ ಕಷ್ಟ ಆಗುತ್ತೆ! ಆದರೆ ನಾನು ಈ ಲೇಹ್ಯಾ ತಿನ್ನಲು ಪ್ರಾರಂಭ ಮಾಡಿದ ಮೇಲೆ ತುಂಬಾ ನೋವು ಕಡಿಮೆ ಆಗಿದೆ!

ಹಾಗಾದರೆ ಮೊದಲು ರೆಸಿಪಿ ನೋಡೋಣ!

ಮಾಡುವ ವಿಧಾನ:-

ಒಳ್ಳೆಯ ಕಂಪೆನಿಯ ಜೇನು ತುಪ್ಪ – 200 ಗ್ರಾಂ
ಅಗಸೆ ಬೀಜ (Flax seed) – 8 ಟೇಬಲ್ ಚಮಚ
ಬಿಳಿ ಎಳ್ಳು – 4 ಟೇಬಲ್ ಚಮಚ
ಒಣ ದ್ರಾಕ್ಷಿ – 3 ಟೇಬಲ್ ಚಮಚ
ಸಿಹಿ ಕುಂಬಳ ಕಾಯಿ ಬೀಜ – 3 ಟೇಬಲ್ ಚಮಚ

ಮೊದಲು ಜೇನು ತುಪ್ಪ ಬಿಟ್ಟು ಮಿಕ್ಕ ಎಲ್ಲಾ ಸಾಮಗ್ರಿಗಳನ್ನು ಪುಡಿ ಮಾಡಿ (ಹುರಿಯುವ ಅಗತ್ಯವಿಲ್ಲ) ನಂತರ ಜೇನು ತುಪ್ಪ ಹಾಕಿ ಮತ್ತೊಮ್ಮೆ ರುಬ್ಬಿ , ನೀರು ಸೇರಿಸ ಕೂಡದು. ಅಳತೆ ಕೂಡ ಸರಿಯಾಗಿ ಇಷ್ಟೇ ಹಾಕಿ. ರುಬ್ಬಿದ ನಂತರ ಇದು ಅಂಟಾದ ಲೇಹ್ಯಾ ತರಹ ಆಗುತ್ತದೆ. ಇದನ್ನು ಒಂದು ಬಾಟಲ್ ನಲ್ಲಿ ಹಾಕಿ Fridge ನಲ್ಲಿ ಇಡಿ.

RELATED ARTICLES  ಕಡ್ಲೆಹಿಟ್ಟು ಆರೋಗ್ಯಕ್ಕೆ ಎಷ್ಟು ಬಲು ಉಪಕಾರಿ!ನಿಮಗೆ ಗೊತ್ತೆ?

ಪ್ರತಿ ದಿನ ಬೆಳಗ್ಗೆ ತಿಂಡಿ ತಿನ್ನುವ ಮುಂಚೆ 1 ಟೀ ಚಮಚ, ಮತ್ತೆ ಮಧ್ಯಾನ್ಹ ಅಥವಾ ರಾತ್ರಿ ಊಟದ ಮುಂಚೆ ಒಂದು ಟೀ ಚಮಚ, ಹೀಗೆ ದಿನಕ್ಕೆ ಎರಡು ಬಾರಿ ತೆಗೆದು ಕೊಂಡರೆ ಮೊಣ ಕಾಲಿನ ನೋವು, ಮುಂಗಾಲಿನ ನೋವು ಕಡಿಮೆ ಆಗುತ್ತಾ ಬರುತ್ತದೆ!

ಇದನ್ನು ಗಂಡಸರು, ಹೆಂಗಸರು ಯಾರೂ ಬೇಕಾದರೂ ತಿನ್ನಬಹುದು. ವಯಸ್ಸಿನ ಅಂತರವಿಲ್ಲ! ತುಂಬಾ ರುಚಿಯಾಗಿರುತ್ತದೆ. ಹಾಗೆಂದು ಹೆಚ್ಚು ತಿನ್ನುವುದೂ ಬೇಡ. ಪ್ರತಿ ದಿನ ತಪ್ಪದೆ ಎರಡು ಬಾರಿ ತಿಂದರೆ ನಿಮಗೆ 1 ವಾರದಲ್ಲಿ ಫಲಿತಾಂಶ ಗೊತ್ತಾಗುತ್ತೆ! ಮೊಣ ಕಾಲಿನ ಮಾಂಸ ಖಂಡಗಳಿಗೆ ಹೊಸ ಶಕ್ತಿ ಬಂದ ಹಾಗೆ ಅನ್ನಿಸುತ್ತೆ.

ನಾನು ಈ ಲೇಹ್ಯಾ ತಿನ್ನಲು ಪ್ರಾರಂಭ ಮಾಡಿದ ಮೇಲೆ Pain killer Tablet ತೆಗೆದು ಕೊಂಡಿಲ್ಲ! ಮೊದಲೆಲ್ಲಾ ವಾರಕ್ಕೆ ಒಮ್ಮೆ, ಮೂರು ದಿನಕ್ಕೆ ಒಮ್ಮೆ ತೆಗೆದು ಕೊಳ್ಳುತ್ತಾ ಇದ್ದೆ. ನನಗಂತೂ ನೋವು ಕಡಿಮೆ ಆಗಿದೆ! ಈಗ No pain killers!

RELATED ARTICLES  ಸೌಂದರ್ಯ ವರ್ಧನೆಗೆ ಸರಳ ಸುಲಭ ಉಪಾಯಗಳು!

ನನಗೆ ಸಹಾಯ ಆಗಿರುವುದರಿಂದ ನಾನು ಈ ರೆಸಿಪಿ ಹಾಕಿದ್ದೇನೆ. ನಾನು ಡಾಕ್ಟರ್ ಅಲ್ಲ! ಅಕಸ್ಮಾತ್ ಯಾರಿಗಾದರೂ ನೋವು ಕಡಿಮೆ ಆಗಲಿಲ್ಲವೆಂದರೆ ದಯವಿಟ್ಟು ನನ್ನ ಬಗ್ಗೆ ಬೇಸರ ಮಾಡಿ ಕೊಳ್ಳಬೇಡಿ. ಯಾರಿಗಾದರೂ 4 ಜನಕ್ಕೆ ನೋವು ಕಡಿಮೆ ಆದರೂ ಸಾಕು ನನ್ನ ಈ ಪ್ರಯತ್ನಕ್ಕೆ ಫಲ ಸಿಕ್ಕ ಹಾಗೆ! ನನಗೆ ಬಹಳ ಸಂತೋಷವಾಗುತ್ತದೆ.

ಆಯುರ್ವೇದದ ಪ್ರಕಾರ ಜೇನು ತುಪ್ಪ ಮಧು ಮೇಹ ಹೆಚ್ಚು ಮಾಡುವುದಿಲ್ಲ ಎಂದು ಹೇಳುತ್ತಾರೆ. ಆದರೂ ನೀವು Diabetes patients ಆಗಿದ್ದಲ್ಲಿ Sugar level ಮೇಲೆ ಕಣ್ಣಿರಲಿ.

ಸಿಹಿ ಕುಂಬಳದ ಬೀಜ ಅಂಗಡಿಯಲ್ಲಿ ಸಿಗುತ್ತೆ. ಆದರೆ ತುಂಬಾ ಜನ ಕಲ್ಲಂಗಡಿ ಹಣ್ಣಿನ ಬೀಜ ಕೊಡುತ್ತಾರೆ‌ ಕಲ್ಲಂಗಡಿ ಬೀಜ ಅಡಿಕೆ ಪುಡಿ, ಖಾರಾ ಚೌ ಚೌ ಗಳಲ್ಲಿ ಹಾಕಿರುತ್ತಾರೆ. ಕಲ್ಲಂಗಡಿ ಬೀಜ, ಸಿಹಿ ಕುಂಬಳದ ಬೀಜ ಬೇರೆ ಬೇರೆ.

ಈ ಲೇಹ್ಯಾ ತಿನ್ನುವಾಗ Positive ಮನಸ್ಸಿನಿಂದ ತಿನ್ನಿ. ಮನಸ್ಸಿನಲ್ಲಿ ಅಳುಕಿದ್ದರೆ, ಸಂದೇಹವಿದ್ದರೆ ಇದು ಕೆಲಸ ಮಾಡುವುದಿಲ್ಲ! ಮತ್ತು ಇದರಲ್ಲಿರುವುದು ಎಲ್ಲಾ ಆರೋಗ್ಯಕರವಾದ ಅಂಶಗಳೇ! Pain killer tablet ನ ಹಾಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲ! ಪ್ರಯತ್ನ ಪಡುವುದರಲ್ಲಿ ತಪ್ಪಿಲ್ಲ ಅಲ್ಲವೇ?

ನೋವು ಬಹಳ ವರ್ಷದಿಂದ ಇದ್ದರೆ ಇದರ ಪರಿಣಾಮ ಸ್ವಲ್ಪ ನಿಧಾನವಾಗಿ ಆಗಬಹುದು, ಹಾಗೆಂದು ಪ್ರಯತ್ನ ಬಿಡಬೇಡಿ!