ಕುಮಟಾ : ತಾಲೂಕಿನ ಮಿರ್ಜಾನ ಗೌಡಕುಳಿಯ ನಿವಾಸಿಯಾದ ಸುನೀಲ ಪುರಸಯ್ಯ ಪಟಗಾರ, ಇವರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಬೈಕ್ ಅಪಘಾತದಿಂದ ತಲೆಗೆ ಪೆಟ್ಟು ಬಿದ್ದು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಅವರಿಗೆ ನೆರವಾಗುವ ನಿಟ್ಟಿನಲ್ಲಿ ಗ್ರಾಮ ಒಕ್ಕಲು ಯುವ ಬಳಗದವರು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಅವರಿಗೆ ರೂ. 7,500 ಸಹಾಯಧನ ನೀಡಿದರು. ಜೊತೆಗೆ ಆರೋಗ್ಯ ದಲ್ಲಿ ಬೇಗ ಚೇತರಿಕೆಯಾಗಲಿ ಎಂದು ಬಳಗದವರು ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದ ಸದಸ್ಯರು ಹಾಗೂ ಸ್ಥಳೀಯ ಯುವ ಬಳಗದ ಸದಸ್ಯರು ಹಾಜರಿದ್ದರು, ಸಂಕಷ್ಟಕ್ಕೆ ನೆರವಾದ ಯುವ ಬಳಗದವರಿಗೆ ಅಲ್ಲಿಯ ಸ್ಥಳೀಯ ಸದಸ್ಯರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.