ಕುಮಟಾ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕುಮಟಾ ಇದರ ನೂತನ ಅಧ್ಯಕ್ಷರಾಗಿ ನ್ಯಾಯಾಂಗ ಇಲಾಖೆಯ ಆರ್.ಡಿ.ನಾಯ್ಕ ಹಾಗೂ ಖಜಾಂಚಿಯಾಗಿ ಬಂದರು ಹಾಗೂ ಒಳನಾಡು ಸಾರಿಗೆ ಇಲಾಖೆಯ ಮುಕುಂದ ಮಡಿವಾಳ ಆಯ್ಕೆಯಾಗಿದ್ದಾರೆ.

ಶನಿವಾರ ಕುಮಟಾದಲ್ಲಿ ನಡೆದ ಚುನಾವಣೆಯಲ್ಲಿ  ನಿಕಟಪೂರ್ವ ಅಧ್ಯಕ್ಷರಾದ ಬಿ.ಡಿ.ನಾಯ್ಕ ತಂಡದ ಬೆಂಬಲಿತ ಡಯಟ್ ಕುಮಟಾದ ಉಲ್ಲಾಸ ನಾಯ್ಕ ಹಾಗೂ ಮಾಜಿ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ ತಂಡದ ಬೆಂಬಲಿತ ನ್ಯಾಯಾಂಗ ಇಲಾಖೆಯ ಆರ್.ಡಿ.ನಾಯ್ಕ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. 

RELATED ARTICLES  ನಾಗರಾಜ ನಾಯಕ ತೊರ್ಕೆ ನೇತ್ರತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ವೃಕ್ಷಾರೋಪಣ

ಅಂತಿಮವಾಗಿ ಆರ್.ಡಿ.ನಾಯ್ಕ 16-7 ಮತಗಳ ಅಂತರದಿಂದ ಉಲ್ಲಾಸ ನಾಯ್ಕ ವಿರುದ್ಧ ಜಯಗಳಿಸಿದರು. ಖಜಾಂಚಿ ಹುದ್ದೆಗೆ ಮುಕುಂದ ಮಡಿವಾಳ ಅವಿರೋಧವಾಗಿ ಆಯ್ಕೆಯಾದರು.

RELATED ARTICLES  ಗ್ರಾಮಪಂಚಾಯತ್ ಚುನಾವಣೆಗೆ ಜಿಲ್ಲೆಯಲ್ಲಿ ಎರಡು ಹಂತದ ಮತದಾನ : ಡಿಸಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ, ಖಜಾಂಚಿಯವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಕುಮಟಾ ತಾಲೂಕಾ ಸಂಘದ 23 ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ನೂತನವಾಗಿ ಆಯ್ಕೆಯಾದ ಆರ್.ಡಿ ನಾಯ್ಕ ಅವರಿಗೆ ಅಭಿನಂದನೆಗಳ ಮಾಹಪೂರವೇ ಹರಿದುಬರುತ್ತಿದೆ.