ಸಿದ್ದಾಪುರ : ಕಲ್ಕತ್ತಾದ ನೇತಾಜಿ ಇಂಡೋರ್ ಸ್ಟೇಡಿಯಂನಲ್ಲಿ ಜುಲೈ 29 ಮತ್ತು 30 ರಂದು ಅಲ್ ಇಂಡಿಯಾ ಸೇಶಿಂಕೈ ಶಿಟೋ ರಿಯೂ ಕರಾಟೆ ಡು ಫೆಡರೇಷನ್ ಆಯೋಜಿಸಿದ ಏಳನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ತಾಲೂಕಿನ ರಾಠೋಡ ಕರಾಟೆ ತರಬೇತಿ ಕೆಂದ್ರದ ಕರಾಟೆ ಪಟು ಆನಂದ ಕೃಷ್ಣ ನಾಯ್ಕ ರಾಜ್ಯ ತಂಡದಿಂದ ಭಾಗವಹಿಸಿ 18+ ಸೀನಿಯರ್ ಕಟಾ ಕೆಟಗರಿಯಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಮಿಂಚಿದ್ದಾರೆ.

RELATED ARTICLES  ಹಿಂದು ಜನಜಾಗೃತಿ ಸಮಿತಿಯ ವತಿಯಿಂದ ಮನವಿ ಸಲ್ಲಿಕೆ

ಭಾರತ ಸೇರಿದಂತೆ 8 ವಿವಿಧ ದೇಶಗಳಿಂದ 5300 ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ ಚಾಂಪಿಯನ್ ಶಿಪ್ ನಲ್ಲಿ ಜಿಲ್ಲೆಯ ಕರಾಟೆ ಪಟು ಆನಂದ ಕೃಷ್ಣ ನಾಯ್ಕ ವಿಶೇಷ ಸಾಧನಗೆ ಅಲ್ ಇಂಡಿಯಾ ಸೇಶಿಂಕೈ ಶಿಟೋ ರಿಯೂ ಕರಾಟೆ ಡು ಫೆಡರೇಷನ್ ರಾಜ್ಯದ ಚೀಪ್ ಕೋಚ್ ಶಿಹಾನ್ ಎಸ್. ಆರ್. ರಾಠೋಡ ಸಿದ್ದಾಪುರ ಮತ್ತು ಶಿರಸಿ ತಾಲೂಕಿನ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

RELATED ARTICLES  ಬೈಕ್ ಅಪಘಾತ : ಯುವಕ ಸಾವು.