ಹೊನ್ನಾವರ : ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಪ್ರತಿಭಾ ಪುರಸ್ಕಾರವು ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತದೆ ಎಂದು ಹೊನ್ನಾವರದ ಎಸ್ ಡಿ ಎಂ ಕಾಲೇಜಿನ ನಿವ್ರತ್ತ ಪ್ರಿನ್ಸಿಪಲರಾದ ಡಾ. ವಿಜಯಲಕ್ಷ್ಮಿ ನಾಯಕ್ ನುಡಿದರು. ಅವರು ಹೊನ್ನಾವರ ತಾಲೂಕಿನ ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಅತಿಥಿಗಳಾಗಿ ಆಗಮಿಸಿದಂತಹ ಉದ್ಯಮಿ ಶ್ರೀ ಶ್ರೀನಿವಾಸ ಮಹಾಲೆ ಶಿರಾಲಿ ಯವರು ಮಾತನಾಡಿ ವಿದ್ಯಾರ್ಥಿಗಳು ಏಕಾಗ್ರತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಪತ್ರಕರ್ತರಾದ ಎಚ್ ಎಮ್ ಮಾರುತಿ ಅವರು ಮಾತನಾಡಿ ವಿದ್ಯೆಯೊಂದಿಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ ಎಂದು ನುಡಿದರು.
ಖ್ಯಾತ ಸಂಗೀತ ಗುರು ಶಿವಾನಂದ ಭಟ್ಟ ಹಡಿನಬಾಳ ಮಾತನಾಡಿ ಸಂಗೀತ ಭರತನಾಟ್ಯ ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುತ್ತದೆ ಎಂದು ನುಡಿದರು.

RELATED ARTICLES  ಹೊನ್ನಾವರ, ಅಂಕೋಲಾ, ಶಿರಸಿಯಲ್ಲಿ ನಾಳೆ ಎಲ್ಲೆಲ್ಲಿ ಕೊರೋನಾ ಲಸಿಕೆ ನೀಡಲಾಗುವುದು?

ಶ್ರೀ ಭಾರತಿ ಎಜುಕೇಶನ್ ಟ್ರಸ್ಟ್ ನ ಗೌರವ ಅಧ್ಯಕ್ಷರಾದ ಶ್ರೀ ವಿ ಜಿ ಹೆಗಡೆ ಗುಡುಗೆ ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಆಡಳಿತಾಧಿಕಾರಿಯಾದ ಎಂ ಎಸ್ ಹೆಗಡೆ ಗುಣವಂತೆ ಹಾಗೂ ಮುಖ್ಯ ಶಿಕ್ಷಕಿಯಾದ ಶ್ರೀಮತಿ ವೈಲೆಟ್ ಫರ್ನಾಂಡಿಸ್ ರವರು ಹಾಗೂ ಕರಾಟೆ ಗುರು ಪ್ರಜ್ವಲ್ ಶೆಟ್ಟಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾಗೂ ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ಕನ್ನಡ ಶಿಕ್ಷಕಿಯಾದ ಶ್ರೀಮತಿ ಪ್ರತಿಮಾ ಬಿಎಂ ರವರನ್ನು ಪುರಸ್ಕರಿಸಲಾಯಿತು. ಡಾ.ವಿಜಯಲಕ್ಷ್ಮಿ ನಾಯ್ಕ್ ಹಾಗೂ ಉದ್ಯಮಿ ಶ್ರೀ ಶ್ರೀನಿವಾಸ ಮಹಾಲೆ ಶಿರಾಲಿ ಯವರನ್ನು ಸನ್ಮಾನಿಸಲಾಯಿತು.

RELATED ARTICLES  ಕುಮಟಾ, ಹೊನ್ನಾವರ, ಯಲ್ಲಾಪುರದ ಕೊರೋನಾ ಅಪ್ಡೇಟ್

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ವೃಂದ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯಾದ ಕುಮಾರಿ ಪ್ರೇಮಿಕ ಲೋಪೀಸ್ ಸ್ವಾಗತಿಸಿದರು ಹಾಗೂ ಶಿಕ್ಷಕಿಯಾದ ಕುಮಾರಿ ಅಂಜನಾ ಶೆಟ್ಟಿ, ನಿರೂಪಿಸಿದರು ಶ್ರೀಮತಿ ಅಶ್ವಿನಿ ಮೇಸ್ತ ವಂದಿಸಿದರು.