ಹೊನ್ನಾವರ : ಇಂದು ಹೊನ್ನಾವರದ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿರುವ ಮತ್ತು ಹಳದೀಪುರದಲ್ಲಿರುವ ಗೃಹ ಲಕ್ಮೀ ನೊಂದಣಿ ಕೇಂದ್ರಕ್ಕೆ ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಭೇಟಿ ನೀಡಿ ಅಲ್ಲಿಯ ಸಿಬ್ಬಂದಿಗಳೊಂದಿಗೆ ಕುಂದು ಕೊರತೆಗಳ ಕುರಿತಂತೆ ವಿಚಾರ ವಿನಿಮಯ ನಡೆಸಿದರು. ಅದೇ ಸಂದರ್ಭದಲ್ಲಿ ಅಲ್ಲಿ ಅರ್ಜಿ ಸಲ್ಲಿಸಲು ಬಂದಿರುವ ಅರ್ಜಿದಾರರ ಸಮಸ್ಯೆಗಳನ್ನು ಆಲಿಸಿದರು. ಸರಕಾರದ ಮಹತ್ವಾಕಾಂಕ್ಷಿ ಗೃಹ ಲಕ್ಮೀ ಯೋಜನೆಯ ಕುರಿತಂತೆ ಜನತೆಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ, ಆದಷ್ಟು ಶೀಘ್ರ ನೊಂದಣಿ ಮಾಡಿಸಿ ಯೋಜನೆಯ ಲಾಭ ಪಡೆದುಕೊಳಲು ಮುಂದಾಗಲು ಜನತೆಗೆ ತಿಳಿ ಹೇಳುವಂತೆ ಪ್ರಜಾಪ್ರತಿನಿಧಿಗಳಲ್ಲಿ ಮನವಿ ಮಾಡಿದರು.

RELATED ARTICLES  ಆತ್ಮಲಿಂಗಕ್ಕೆ ನವಧಾನ್ಯಭಿಷೇಕ ಮತ್ತು ಸುವರ್ಣ ನಾಗಾಭರಣ ಪೂಜಾ ಸೇವೆ ನೆರವೇರಿಸಿದ ಗೋವಾ ರಾಜ್ಯಪಾಲರು.

ಈ ಸಂದರ್ಭದಲ್ಲಿ ಅವರೊಂದಿಗೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ, ಸೇವಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರಿಮನೆ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿ ಪಾರೂಕ್ ಶೇಖ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಕ್ರಿಯ್ಯಾ ಶೇಖ, ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಫಾ ಮಹೇಶ, ಸೇವಾದಳದ ಅಧ್ಯಕ್ಷ ಮೋಹನ ಆಚಾರಿ, ಹೊನ್ನಾವರ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಪಕ್ಷದ ಮುಖಂಡರಾದ ವಿನೋದ ನಾಯ್ಕ, ದಾಮೋದರ ನಾಯ್ಕ, ಸಚಿನ್ ನಾಯ್ಕ, ಕಲ್ಪನಾ ರ‍್ಹೋನಾ, ಮಾದೇವ ನಾಯ್ಕ, ಹನೀಪ ಶೇಖ, ಮನ್ಸೂರ್ ಸೈಯದ್, ಸಂಶಿರ್ ಶಾ, ಮಹೇಶ ನಾಯ್ಕ, ಜನಾರ್ಧನ ನಾಯ್ಕ, ವಸಿಂ ಸಾಬ್, ರವಿ ಮೊಗೇರ, ಗೊಯ್ದು ಮುಕ್ರಿ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.

RELATED ARTICLES  ಕ್ಯಾಮರಾದಲ್ಲಿ ಬೈಕ್ ನಂಬರ್ ನೊಂದಣಿಯಾದ್ರೆ ಪೈನ್ ಗ್ಯಾರಂಟಿ : ಅದು ಹೇಗೆ ಗೊತ್ತೇ?