ಬೆಂಗಳೂರು: ಫೇಸ್​ಬುಕ್​ನಲ್ಲಿ ಯಾರದೋ ಫೋಟೋ ಹಾಕಿ ಬರೋಬ್ಬರಿ 41 ಲಕ್ಷ ರೂಪಾಯಿ ಪಂಗನಾಮ ಹಾಕಿದ ಘಟನೆ ನಡೆದಿದೆ. ‘ಗೀತಾ ಸೆಕ್ಸಿ’ ಎಂಬ ಹೆಸರಲ್ಲಿ ಫೇಸ್​ಬುಕ್ ಖಾತೆ ತೆರೆದು ರಾಮನಗರ ಜಿಲ್ಲೆಯ ಕನಕಪುರದ ಯುವಕನಿಗೆ ಮೋಸ ಮಾಡಲಾಗಿದೆ. ಈ ಸಂಬಂಧ ರಾಮನಗರದ ಸೈಬರ್​ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೇಸ್​ಬುಕ್​ನಲ್ಲಿ ಗೀತಾ ಸೆಕ್ಸಿ ಎಂಬ ಖಾತೆಯೊಂದು ಓಪನ್ ಆಗಿತ್ತು. ಇದು ರಾಮನಗರ ಜಿಲ್ಲೆಯ ಯುವಕನ ಕಣ್ಣಿಗೆ ಬಿದ್ದಿತ್ತು. ಫೇಸ್​ಬುಕ್​ನ ಬಯೋದಲ್ಲಿ ‘ಬೆಂಗಳೂರಿನಿಂದ ಹಾಸನ, ಕುಣಿಗಲ್, ರಾಮನಗರ, ಶಿವಮೊಗ್ಗದವರೆಗೂ ಸರ್ವೀಸ್ ಇದೆ. ಫ್ರೆಶ್ ಹುಡುಗಿರು ಇದ್ದಾರೆ’ ಎಂದು ಬರೆದಿತ್ತು.

RELATED ARTICLES  ಉಚಿತ ತಿಂಡಿಗಳು, ಪಾನೀಯಗಳು ಮತ್ತು ಸೆಲ್ಟ್ಜರ್ ನೀರು ನೀಡುವುದನ್ನು ನಿಲ್ಲಿಸಿದ ಗೂಗಲ್.

ಇದನ್ನು ಓದಿದ ಯುವಕ ಮೆಸೇಜ್ ಮಾಡಿದ್ದಾರೆ. ಹುಡುಗಿ ಬೇಕಾದರೆ 800ರೂಪಾಯಿ ಹಣದೊಂದಿಗೆ ನಿಮ್ಮ ಫೋಟೋವನ್ನು ಕಳುಹಿಸಿ ಎಂದು ರಿಪ್ಲೈ ಬಂದಿತ್ತು. ಹೌದು ಎಂದು ನಂಬಿದ ಆ ಯುವಕ ಹಣ ಮತ್ತು ಫೋಟೋವನ್ನು ಕಳುಹಿಸಿದ್ದ.

ಫೋಟೋ ಕಳುಹಿಸುತ್ತಿದ್ದಂತೆ ಆ ಫೋಟೋವನ್ನು ಬೆತ್ತಲೆಯಾಗಿ ಮಾರ್ಪಿಂಗ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನಿನ್ನ ಸ್ನೇಹಿತರಿಗೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡೋದಾಗಿ ಬೆದರಿಸಿದ್ದಾರೆ. ಇದರಿಂದ ಗಾಬರಿಯಾದ ಯುವಕ ಹಣ ನೀಡಿದ್ದಾರೆ. ವರದಿಗಳ ಪ್ರಕಾರ ಕಳೆದ ಆರು ತಿಂಗಳಿಂದ ಸುಮಾರು 41 ‌ಲಕ್ಷ ರೂಪಾಯಿ ಹಣವನ್ನು ಪೀಕಿದ್ದಾರೆ. ಫೋನ್​ ಪೇ, ಗೂಗಲ್ ಪೇ ಮೂಲಕ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ರಾಮನಗರ ಸೈಬರ್​ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES  ಜಾಕ್‍ಪಾಟ್ ಹೊಡೆದಿದೆ. ಡ್ರೈವರ್ ಅಗಿ ಕೆಲಸ ಮಾಡುತ್ತಿದ್ದವ ರಾತ್ರೋರಾತ್ರಿ ಕೋಟ್ಯಧಿಪತಿ