ಸಿದ್ದಾಪುರ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಾಲೂಕಿನ ಮನ್ಮನೆಯ ಯೋಧ ಗಿರೀಶ್ ಎಸ್ ನಾಯ್ಕ (56) ವಿಧಿವಶರಾಗಿದ್ದಾರೆ. ಸಿಕಂದರಾಬಾದ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದಾರೆ.ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮ ಮನೆಗೆ ತರಲಿದ್ದಾರೆ.
ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ಕಾರ್ಯ ನೆರವೇರಿಸಲಾಗುತ್ತದೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.

RELATED ARTICLES  ರಾಜ್ಯ ಹೆದ್ದಾರಿ ನಿರ್ವಹಣೆ : ಹೆಣಗಾಡುತ್ತಿದೆ ಶಿರಸಿ ಸ್ಥಳೀಯ ಹಾಗೂ ನಗರ ಸಂಸ್ಥೆಗಳು!