ಹೊನ್ನಾವರ : ತಾಲೂಕಿನಲ್ಲಿ 133 ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದರೂ, ಶಿಕ್ಷಕರನ್ನು ಹೊರತುಪಡಿಸಿ ಇತರೆ 12 ಇಲಾಖೆಯ ನೌಕರರನ್ನು ಬಿ.ಎಲ್.ಓ ಗಳಾಗಿ ನೇಮಿಸಿಕೊಳ್ಳಲು ಅವಕಾಶ ಇದ್ದಾಗಲೂ 80 ಕ್ಕೂ ಹೆಚ್ಚು ಶಿಕ್ಷಕರನ್ನು ಬೋಧಕೇತರ ಕರ್ತವ್ಯವಾದ ಬಿ.ಎಲ್.ಓ ಕರ್ತವ್ಯಕ್ಕೆ ನೇಮಿಸಲಾಗಿದೆ. ಬಿ.ಎಲ್.ಓ ಆಗಿ ನಮೂನೆಗಳ ಸಂಗ್ರಹ, ಮನೆಭೇಟಿ, ಪಂಚನಾಮೆ, ಮತದಾರರೊಂದಿಗೆ ಮಾಹಿತಿ ವಿನಿಮಯ ಮೊಬೈಲನಲ್ಲಿ ಮಾಹಿತಿ ಸಂಗ್ರಹಿಸಿ ಆಗಾಗ ಕಛೇರಿಗೆ ನೀಡುದರಿಂದ ಬೋಧನೆಯಲ್ಲಿ ಏಕಾಗ್ರತೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಜೊತೆ ಇತರೆ ಜವಬ್ದಾರಿಯನ್ನು ಶಿಕ್ಷಕರಿಗೆ ನೀಡುದರಿಂದ ಒತ್ತಡ ಮತ್ತು ಮಾನಸಿಕವಾಗಿ ಗೊಂದಲಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳ ಮೂಲಭೂತ ಹಕ್ಕಾದ ಗುಣಮಟ್ಟದ ಶಿಕ್ಷಣಕ್ಕೆ ಇದರಿಂದ ಅಡ್ಡಿಯಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಿಕ್ಷಕರನ್ನು ಮತಗಟ್ಟೆ ಮಟ್ಟದ ಅಧಿಕಾರಿ ಸೇರಿದಂತೆ ಇತರೆ ಬೋಧಕೇತರ ಕಾರ್ಯಗಳಿಗೆ ನಿಯೋಜನೆ ಮಾಡದಂತೆ ಇಲಾಖೆ ಮತ್ತು ಸರಕಾರದ ಆದೇಶ ಹಾಗೂ ರಾಜ್ಯ ಉಚ್ಛ ನ್ಯಾಯಾಲಯದ ತೀರ್ಪು ಸಹ ಉಲ್ಲಂಘನೆ ಮಾಡುವ ಮೂಲಕ ನಿಯೋಜಿಸಲಾಗಿದ್ದು ಇದನ್ನು ರದ್ದುಪಡಿಸುವಂತೆ ಶಿಕ್ಷಕರು ತಹಶೀಲ್ದಾರ ಮೂಲಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

RELATED ARTICLES  ರಾಬಿತಾ ಸೂಸೈಟಿ ವತಿಯಿಂದ ಅ.2 ರಂದು ಪ್ರತಿಷ್ಠಿತ ರಾಬಿತಾ ಶೈಕ್ಷಣಿಕ ಪ್ರಶಸ್ತಿ ಪುರಸ್ಕಾರ ಸಮಾರಂಭ

ತಹಶೀಲ್ದಾರ ರವಿರಾಜ್ ದಿಕ್ಷಿತ್ ಮನವಿ ಸ್ವೀಕರಿಸಿದರು. ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ತಾಲೂಕಿನ ಎಲ್ಲಾ ಬಿ.ಎಲ್.ಓ ಶಿಕ್ಷಕರನ್ನು ಕಾರ್ಯದಿಂದ ಬಿಡುಗಡೆಗೊಳಿಸಿ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುವಂತೆ ಆಗ್ರಹಿಸಿದರು.

RELATED ARTICLES  ಮಹಿಳೆಯರಿಗೂ ವರದಾನವಾಯಿತು ಉದ್ಯೋಗ ಖಾತರಿ ಯೋಜನೆ - ಉಮೇಶ ಮುಂಡಳ್ಳಿ

ಜಿಲ್ಲಾ ಸಂಘದ ಗೌರವಧ್ಯಕ್ಷ ಸುಧೀಶ ನಾಯ್ಕ, ಜಿಲ್ಲಾ ದೈಹಿಕ ಸಂಘದ ಉಪಾಧ್ಯಕ್ಷೆ ಸಾಧನಾ ಬರ್ಗಿ, ತಾಲೂಕ ಸಂಘದ ಕಾರ್ಯದರ್ಶಿ ಕೆ.ಎಂ. ಹೆಗಡೆ, ಉಪಾಧ್ಯಕ್ಷೆ ಲಕ್ಷ್ಮಿ ಎಚ್, ಪದಾಧಿಕಾರಿಗಳಾದ ಸುರೇಶ ನಾಯ್ಕ, ಶಾರದಾ ಹೆಗಡೆ, ಅಣ್ಣಪ್ಪ ನಾಯ್ಕ, ಪಿ.ಆರ್.ನಾಯ್ಕ, ಬಿ.ಎಲ್.ಓ.ಗಳು ಉಪಸ್ಥಿತರಿದ್ದರು