ಅಲರ್ಜಿಯಿಂದ ಮೈಯೆಲ್ಲಾ ತುರಿಸುವುದು, ಕೆಂಪು ಗುಳ್ಳೆಗಳು ಏಳುವುದು, ಅಲರ್ಜಿ ಶೀತ, ಕೆಮ್ಮು ಮುಂತಾದ ಸಮಸ್ಯೆಗಳು ಕಂಡುಬರುತ್ತದೆ. ಅಲರ್ಜಿ ಯಾವ ಕಾರಣದಿಂದ ಬರುತ್ತಿದೆ ಎಂದು ಹೆಚ್ಚಿನ ಬಾರಿ ತಿಳಿಯುವುದೇ ಇಲ್ಲ. ಅಲರ್ಜಿಗೆ ಕಾರಣ ಸರಿಯಾಗಿ ತಿಳಿಯದಿದ್ದರೆ ಅದಕ್ಕೆ ಚಿಕಿತ್ಸೆ ಮಾಡಿದರೂ ಅಲರ್ಜಿ ಸಮಸ್ಯೆ ಆಗಾಗ ಕಂಡು ಬರುತ್ತದೆ.
ಸಾಮಾನ್ಯವಾಗಿ ದೂಳು, ಮಾಲಿನ್ಯ, ವಿಷಕಾರಕ ಸಸ್ಯಗಳು, ಇಂಜೆಕ್ಷನ್ ಮತ್ತು ಡ್ರಗ್ಸ್ ಈ ಕಾರಣಗಳಿಂದ ಅಲರ್ಜಿ ಉಂಟಾಗುವುದು. ಕೆಲವರಿಗೆ ಅತೀ ಶಾಖ ಅಥವಾ ಅತೀ ಕಡಿಮೆ ಉಷ್ಣತೆ ಇರುವ ಸ್ಥಳಕ್ಕೆ ಹೋದಾಗ ಕೂಡ ಅಲರ್ಜಿ ಉಂಟಾಗುವುದು. ಕೆಲವೊಮ್ಮೆ ಶುಚಿಯಿಲ್ಲದ ಅಹಾರ ಸೇವನೆ , ಜೀವನ ಶೈಲಿ, ದೈಹಿಕ ಸುಸ್ತು, ಮಾನಸಿಕ ಒತ್ತಡ ಇವುಗಳು ಕೂಡ ಅಲರ್ಜಿ ಸಮಸ್ಯೆಗೆ ಒಂದು ಕಾರಣವಾಗಿದೆ. ಈ ರೀತಿ ಅಲರ್ಜಿ ಉಂಟಾದರೆ ತಲೆ ನೋವು, ಮುಖ ಮೈ ಊದಿಕೊಳ್ಳುವುದು, ಚರ್ಮದಲ್ಲಿ ಕೆಂಪು ಗುಳ್ಳೆಗಳು ಕಂಡುಬರುತ್ತದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ದೇಹವು ಈ ಅಲರ್ಜಿ ವಿರುದ್ಧ ಹೋರಾಡಲು ಅಸಮರ್ಥವಾಗುವುದು. ಆಹಾರ ಸಾಮಾಗ್ರಿಗಳಿಂದ ಬರುವ ಅಲರ್ಜಿಯಾದರೆ ತಕ್ಷಣ ಗ್ರಹಿಸಬಹುದು. ಏಕೆಂದರೆ ಆ ಆಹಾರ ತಿಂದ ತಕ್ಷಣ ಅಲರ್ಜಿಯ ಲಕ್ಷಣಗಳು ಕಂಡು ಬರುತ್ತವೆ. ಸಾಮಾನ್ಯವಾಗಿ ಈ ಕೆಳಗಿನ ಆಹಾರಗಳು ಫುಡ್ ಅಲರ್ಜಿ ತರುತ್ತದೆ. ಹಾಗಂತ ಈ ಆಹಾರಗಳು ಎಲ್ಲಾ ವ್ಯಕ್ತಿಗಳಿಗೆ ಅಲರ್ಜಿ ತರುವುದಿಲ್ಲ, ಬರೀ ಆಹಾರದಿಂದ ತಿಂದ ಮಾತ್ರವಲ್ಲ, ಈ ಕೆಳಗಿನ ಯಾವುದಾದರೂ ಒಂದು ಕಾರಣದಿಂದ ಕೂಡ ಅಲರ್ಜಿ ಉಂಟಾಗುವುದು.

RELATED ARTICLES  ನಾಳೆ ಕುಮಟಾದಲ್ಲಿ "ನಮ್ಮ ಕ್ಲಿನಿಕ್ ಉದ್ಘಾಟನೆ"

ಅಲರ್ಜಿಗೆ ಕಾರಣಗಳು:
ಮೊಟ್ಟೆ, ಮೀನು, ಏಡಿ, ಮೃದ್ವಂಗಿಗಳು, ವಾಲ್ ನೆಟ್, ಹಾಲು, ಗೋಧಿ, ಸೋಯಾಬೀನ್ಸ್, ಚಾಕಲೇಟ್, ಹಾಳಾದ ಆಹಾರ ಸೇವನೆ, ಮಿತಿಮೀರಿದ ಒತ್ತಡ, ಮಾನಸಿಕ ಒತ್ತಡ, ಕೀಟಗಳು, ಔಷಧಿಗಳು.
ಅಲರ್ಜಿಯ ಲಕ್ಷಣಗಳು:
ಆಗಾಗ ಕಾಡುವ ತಲೆನೋವು, ಜ್ವರ, ವಾಂತಿ, ಮೈಗ್ರೇನ್, ತಲೆಸುತ್ತು, ಖಿನ್ನತೆ, ಮೈಯೆಲ್ಲಾ ತುರಿಕೆ, ಅಸ್ತಮಾ, ಅಸ್ತಮಾ, ಉಸಿರಾಟದಲ್ಲಿ ತೊಂದರೆ ಶೀನು, ಕೆಮ್ಮು, ಶೀತ, ಮೈಯೆಲ್ಲಾ ಊದಿಕೊಳ್ಳುವುದು, ಕಣ್ಣಿನ ಸುತ್ತ ಕಪ್ಪು ವರ್ತುಲ.
ಅಲರ್ಜಿಗೆ ಮನೆ ಮದ್ದು:

1. ಗಂಧವನ್ನು ತೇಯ್ದು ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ, ತುರಿಕೆ ಕಂಡು ಬರುವ ಜಾಗದಲ್ಲಿ ಹಾಕಿದರೆ ತುರಿಕೆ ಕಡಿಮೆಯಾಗುವುದು.

2. ಬಾದಾಮಿಯನ್ನು ಪೇಸ್ಟ್ ರೀತಿ ಮಾಡಿ ತುರಿಕೆ ಕಂಡು ಬಂದಲ್ಲಿ ಹಚ್ಚಿದರೆ ತುರಿಕೆ ಕಡಿಮೆಯಾಗುವುದು.

3. ಪುದೀನಾ ಎಲೆಯನ್ನು ಪೇಸ್ಟ್ ಮಾಡಿ ಅದನ್ನು ಒಂದು ಗ್ಲಾಸ್ ಗೆ ಹಾಕಿ ಪಾನಕ ರೀತಿ ಮಾಡಿ ಒಂದು ಚಮಚ ಸಕ್ಕರೆ ದಿನಕ್ಕೆ ಎರಡು ಬಾರಿ ಕುಡಿದರೆ ಅಲರ್ಜಿ ಸಮಸ್ಯೆ ನಿವಾರಣೆಯಾಗುವುದು.

RELATED ARTICLES  ಮಕ್ಕಳಿಗೆ ಬರುವ ಸಾಮಾನ್ಯ ಖಾಯಿಲೆಗಳು ಮತ್ತು ಸರಳ ಪರಿಹಾರ!

4. ಅಲರ್ಜಿ ಬಂದು ತುಂಬಾ ತುರಿಕೆ ಉಂಟಾದರೆ ಪಪ್ಪಾಯಿ ಬೀಜವನ್ನು ಪೇಸ್ಟ್ ರೀತಿ ಮಾಡಿ ತುರಿಕೆ ಇರುವ ಜಾಗಕ್ಕೆ ಹಚ್ಚಿದರೆ ತುರಿಕೆ ಕಡಿಮೆಯಾಗುವುದು.
5. 3-4 ಚಮಚ ತೆಂಗಿನೆಣ್ಣೆಗೆ 2 ಚಮಚ ನಿಂಬೆ ರಸ ಹಾಕಿ ಮಿಶ್ರ ಮಾಡಿ ಹಚ್ಚಿದರೆ ಅಲರ್ಜಿಯಿಂದ ಮೈ ಕೆಂಪಾಗಿದ್ದರೆ ಅದು ಕಡಿಮೆಯಾಗುವುದು.
6. ವಿಟಮಿನ್ ಸಿ ಅಧಿಕವಿರುವ ಆಹಾರ ತಿನ್ನಬೇಕು.

7. ಎರಡು ಚಮಚ ಸೈಡರ್ ವಿನಗರ್ ಅನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುಡಿದರೆ ಅಲರ್ಜಿ ಕಡಿಮೆಯಾಗುವುದು.
8. ಐದು ಚಮಚ ಹರಳೆಣ್ಣೆಯನ್ನು ಒಂದು ಲೋಟ ಹಣ್ಣಿನ ಜ್ಯೂಸ್ ಅಥವಾ ಬರೀ ನೀರಿನಲ್ಲಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟಯಲ್ಲಿ ಕುಡಿದರೆ ಅಲರ್ಜಿ ಸಮಸ್ಯೆಯನ್ನು ಹೋಗಲಾಡಿಸಬಹುದು.

9. ಕ್ಯಾರೆಟ್, ಬೀಟ್ ರೂಟ್, ಸೌತೆಕಾಯಿ ಈ ಮೂರನ್ನು ಮಿಶ್ರ ಮಾಡಿ ಜ್ಯೂಸ್ ತಯಾರಿಸಿ ಕುಡಿದರೆ ಅಲರ್ಜಿ ಸಮಸ್ಯೆ ಕಡಿಮೆಯಾಗುವುದು.

ಸಲಹೆ: ಈ ಮನೆಮದ್ದು ಪಾಲಿಸುವಾಗ ಅಲರ್ಜಿ ಕಾರಣವಾದ ಆಹಾರಗಳನ್ನು ತಿನ್ನಬಾರದು.