ಶಿರಸಿ : ಬಸ್, ಬೋಲರ್ ಹಾಗೂ ಓಮ್ಮಿ ನಡುವೆ ಸರಣಿ ಅಪಘಾತದಲ್ಲಿ ಬೋಲೆರೊ ವಾಹನ ಅಂಗಡಿಯೊಳಗೆ ನುಗ್ಗಿ ಹಲವರು ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿಸಲಕೊಪ್ಪ ಬಳಿ ಇಂದು ಗುರುವಾರ ಬೆಳಿಗ್ಗೆ ನಡೆದಿದೆ. ಮಳಗಿಯಿಂದ ಶಿರಸಿಗೆ ಸಾಗುತ್ತುತ್ತಿದ್ದ ಓಮ್ಮಿ ಬೋಲೆರೋ ಹಾಗೂ ಶಿರಸಿಯಿಂದ ಹಾವೇರಿ ಜಿಲ್ಲೆಗೆ ಚಲಿಸುತ್ತಿದ್ದ ಮೂರು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು ಓಮ್ಮಿ ಹಾಗೂ ಬೋಲೆರೋ ವಾಹನ ರಸ್ತೆ ಬದಿಯ ಅಂಗಡಿಗಳಿಗೆ ನುಗ್ಗಿದೆ. ಇದರಿಂದ ವಾಹನದಲ್ಲಿ ಇದ್ದವರು ಗಾಯಗೊಂಡಿದ್ದಾರೆ. ಗಾಯಗೊಂಡಿದ್ದವರನ್ನ ತಕ್ಷಣ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

RELATED ARTICLES  ಸಾಧನೆ ತೋರಿದ ರವಿ ಹರಿಕಾಂತ