ಕಾರವಾರ : ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡ ಹಿನ್ನೆಲೆ ಬುಧವಾರ ಭಾರಿ ಮಳೆಯಾಗಲಿದ್ದು ಹಲವು ಜಿಲ್ಲೆಗಳಲ್ಲಿ ಆಗಸ್ಟ್ 3ರಿಂದ ಮತ್ತೆ ಧಾರಾಕಾರ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಬೆಳಗಾವಿ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಅಲ್ಲದೇ ಇನ್ನುಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

RELATED ARTICLES  ಇಸ್ರೊದಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಳೆದ ಕೆಲ ದಿನಗಳಿಂದ ವಿರಾಮ ಪಡೆದಿದ್ದ ಮಳೆರಾಯ ಮತ್ತೆ ಅರ್ಭಟಿಸಲಿದ್ದಾನೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್ ಮೂರರಿಂದ ಮಳೆ ಸುರಿಯಲಿದೆ. ಇನ್ನೂ ವಿಜಯಪುರ, ರಾಯಚೂರು, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ಹಾವೇರಿ, ಬೀದರ್, ಬಾಗಲಕೋಟೆ, ಕಲಬುರಗಿ, ಬಳ್ಳಾರಿ, ಯಾದಗಿರಿ, ಬೆಂಗಳೂರು ನಗರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಚಿತ್ರದುರ್ಗ, ಕೋಲಾರ, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

RELATED ARTICLES  ವಿನಾಯಕ ದೇವಾಲಯ ಇಡುಗುಂಜಿಯಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ.

ಜೇವರ್ಗಿ, ತಾಳಗುಪ್ಪ, ಸುಳ್ಯ, ಮುಲ್ಕಿ, ಕೋಟ, ಗುಂಜಿ, ಕಮಲಾಪುರ, ಅಫಜಲಪುರ, ಬಿಳಗಿ, ಹಾವೇರಿ, ಪಿಟಿಒ, ಸಿದ್ದಾಪುರ, ಕ್ಯಾಸಲ್​ ರಾಕ್, ಗೇರುಸೊಪ್ಪ, ಶೃಂಗೇರಿ, ಕಾರ್ಕಳ, ಬೆಳ್ತಂಗಡಿ, ಕದ್ರಾ, ಕೊಟ್ಟಿಗೆಹಾರ, ಕಮ್ಮರಡಿ, ಕೊಪ್ಪ, ಜಯಪುರ, ಕುಂದಾಪುರ, ಕೊಲ್ಲೂರು, ಹೊನ್ನಾವರದಲ್ಲಿ ಮಳೆಯಾಗಿದೆ.

ಬಸವನ ಬಾಗೇವಾಡಿ, ಸೋಮವಾರಪೇಟೆ, ಭಾಗಮಂಡಲ, ಶನಿವಾರಸಂತೆ, ಕಳಸ, ಬಾಳೆಹೊನ್ನೂರು, ಸಕಲೇಶಪುರ, ಹುಂಚದಕಟ್ಟೆ, ಸುಬ್ರಹ್ಮಣ್ಯ, ಉಪ್ಪಿನಂಗಡಿ, ಪುತ್ತೂರು, ಮಂಚಿಕೆರೆ, ಕುಮಟಾ, ಶಿರಾಲಿ, ಮಂಕಿ, ಬೇಲಿಕೇರಿ, ಲೋಂಡಾದಲ್ಲಿ ಮಳೆಯಾಗಿದೆ.