ಶಿರಸಿ: ತಾನು ಕೆಲಸ ಮಾಡುತ್ತಿರುವ ಅಂಗಡಿಯಲ್ಲೇ ಬಂಗಾರದ ಗಟ್ಟಿಯನ್ನು ಕಳ್ಳತನ ಮಾಡಿ, ಪರಾರಿಯಾಗಿದ್ದ ಆರೋಪಿಯನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಮೋಹನ್ ಬಿಂದು ರೋಮ್(30) ಬಂಧಿತ ಆರೋಪಿಯಾಗಿದ್ದು, ಸಿಂಪಿಗಲ್ಲಿಯಲ್ಲಿ ಅಭಿಜಿತ್ ಸುಬ್ರಹ್ಮಣ್ಯ ಶೇಟ್ ಎಂಬುವವರ ಹತ್ತಿರ ಬಂಗಾರದ ಕೆಲಸ ಮಾಡಿಕೊಂಡಿದ್ದ ಈತ, ವೈಯಕ್ತಿಕ ಕೆಲಸದ ನಿಮಿತ್ತ ಮಾಲೀಕ ಹೊರಗಡೆ ಹೋದ ಸಂದರ್ಭದಲ್ಲಿ 1.25 ಲಕ್ಷ ರೂ. ಮೌಲ್ಯದ 23 ಗ್ರಾಂ ತೂಕದ ಬಂಗಾರದ ಗಟ್ಟಿ ಕಳ್ಳತನ ಮಾಡಿ ಪರಾರಿಯಾಗಿದ್ದ.ಈ ಸಂಬಂಧ ದಾಖಲಾದ ಪ್ರಕರಣವನ್ನು ಕೈಗೆತ್ತಿಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಬಂಗಾರದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಜೈಕುಮಾರ, ಡಿ.ಎಸ್.ಪಿ ಕೆ.ಎಲ್. ಗಣೇಶ, ಸಿ.ಪಿ.ಐ ರಾಮಚಂದ್ರ ನಾಯಕ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಗಳಾದ ರಾಜಕುಮಾರ.ಎಸ್. ಉಕ್ಕಲಿ, ರತ್ನಾ ಕುರಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ನಾಗಪ್ಪ ಲಮಾಣಿ, ಪ್ರಶಾಂತ ಪಾವಸ್ಕರ, ಮಧುಕರ ಗಾಂವಕರ, ಸದ್ದಾಂ ಹುಸೇನ್ ಬಿ, ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.