ಕಾರವಾರ: ಕೆನರಾ ವೆಲ್ಫೇರ್ ಟ್ರಸ್ಟ್ ಹಾಗೂ ಮೆರಿಟ್ಯೂಡ್ ಇವರ ಸಹಯೋಗದಲ್ಲಿ ಮತ್ತು ಸುಪ್ರೀಮ್ ಕೋರ್ಟ್ ಸೀನಿಯರ್ ಅಡ್ವೊಕೇಟ್ ದೇವದತ್ತ ಕಾಮತ್ ಇವರ ಪ್ರಾಯೋಜಕತ್ವದಲ್ಲಿ ಕಾರವಾರ ನಗರದ ದಿವೆಕರ್ ಕಾಲೇಜಿನಲ್ಲಿ ಬೃಹತ್ ಉದ್ಯೋಗಮೇಳವನ್ನು ಆ.6 ಭಾನುವಾರಂದು ಬೆಳಿಗ್ಗೆ 9.30 ರಿಂದ ಸಾಯಂಕಾಲ 5.30 ಘಂಟೆಯವರೆಗೆ ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ, ಐಟಿಐ, ಡಿಪ್ಲೋಮ, ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ಶಿಕ್ಷಣ ಪಡೆದ 18 ವರ್ಷ್ ಮೇಲ್ಪಟ್ಟ ಯುವಕ ಯುವತಿಯರು ಈ ಮೇಳದಲ್ಲಿ ಭಾಗವಹಿಸಬಹುದು.

RELATED ARTICLES  Job News - 30 ಸಾವಿರದಿಂದ 60 ಸಾವಿರ ರೂಪಾಯಿ ಸಂಬಳ.

ಈ ಉದ್ಯೋಗ ಮೇಳಕ್ಕೆ ಉಚಿತ ಪ್ರವೇಶವಿದ್ದು, ಯಾವುದೇ ನೋಂದಣಿ ಶುಲ್ಕವಿರುವುದಿಲ್ಲ. ಉದ್ಯೋಗಾಕಾಂಕ್ಷಿಗಳು ಆನ್-ಲೈನ್ ಮೂಲಕ ತಮ್ಮ ವಿವರಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳುವ ಮೂಲಕ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

RELATED ARTICLES  ರಾಜ್ಯ ಅಬಕಾರಿ ಇಲಾಖೆಯಲ್ಲಿ ಉಪ ನಿರೀಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ನೋಂದಾವಣಿ ಮಾಡುವ ಆಕಾಂಕ್ಷಿಗಳು Tel:+918884461670 ಮತ್ತು Tel:+918884461669 ಸಂಖ್ಯೆಗೆ ಕಾಲ್ ಮಾಡುವ ಮೂಲಕ ಮತ್ತು http://karwarjf.meritude.in ಜಾಲತಾಣದಲ್ಲಿ
ನಲ್ಲಿ ತಮ್ಮ ವಿವರ ದಾಖಲಿಸುವ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಈ ಕಾರ್ಯಕ್ರಮ ನಿರ್ವಹಣೆ ಮಾಡುತ್ತಿರುವ ನಾಗರಾಜ ಮಡಿವಾಳ ತಿಳಿಸಿದ್ದಾರೆ.