ಕುಮಟಾ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ.ಕುಮಟಾ ಇದರ ನೂತನ ಅಧ್ಯಕ್ಷರಾದ ರಘುನಾಥ. ಡಿ. ನಾಯ್ಕ ಹಾಗೂ ಕೋಶಾಧ್ಯಕ್ಷರಾದ ಮುಕುಂದ ಮಡಿವಾಳ ಇವರು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ಜೊತೆ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಶೆಟ್ಟಿಯವರನ್ನು ಭೇಟಿಯಾಗಿ ಗೌರವಿಸಿದರು. ಗೌರವ ಸ್ವೀಕರಿಸಿ ಮಾತನಾಡಿದ ಶಾಸಕರು ” ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಕೋಶಾಧ್ಯಕ್ಷರನ್ನು ಅಭಿನಂದಿಸುವುದಾಗಿಯೂ ಸಂಘವನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗುವಂತೆಯೂ” ಸೂಚಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರು ಪದಾಧಿಕಾರಿಗಳು ಸಂಘದ ಚಟುವಟಿಕೆಗಳಿಗೆ ಶಾಸಕರ ಬೆಂಬಲವನ್ನು ಕೋರಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ರಘುನಾಥ.ಡಿ.ನಾಯ್ಕ, ಕೋಶಾಧ್ಯಕ್ಷರಾದ ಮುಕುಂದ ಮಡಿವಾಳ, ಹಿರಿಯ ಸದಸ್ಯರಾದ ರವೀಂದ್ರ ಭಟ್ಟ ಸೂರಿ, ಕಾರ್ಯದರ್ಶಿಗಳಾದ ಗುರುದಾಸ ಮಹಾಲೆ, ಎಂ.ಎಂ.ಹೆಗಡೆ, ಮಂಜುನಾಥ ಟಿ ನಾಯ್ಕ ಉಪಸ್ಥಿತರಿದ್ದರು.