ಶಿರಸಿ: ಇಲ್ಲಿನ ಬನವಾಸಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆ.3ರಂದು ಎರಡು ಪ್ರಾಜೆಕ್ಟರ್, ಆಂಡ್ರಾಯ್ಡ್ ಬಾಕ್ಸ್, ಹಾಗೂ ನಾಲ್ಕು ಸ್ಪೀಕರ್ ಕಳ್ಳತನವಾಗಿದೆಯೆಂದು ಕಾಲೇಜಿನ ಪ್ರಾಂಶುಪಾಲೆ ದಾಕ್ಷಾಯಿಣಿ ಹೆಗಡೆ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.

ದಾಖಲಾದ ದೂರಿನನ್ವಯ ಕಾರ್ಯಪ್ರವೃತ್ತರಾದ ಪೋಲಿಸರು 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಶಾಂತಿನಗರದ ವಿನಯ್ ಗೌಳಿ, ಗಣೇಶನಗರದ ಪವನಕುಮಾರ್, ಹಾಗೂ ಇನ್ನೋರ್ವ ಅಪ್ರಾಪ್ತ ಬಾಲಕ ಸೇರಿದಂತೆ ಮೂವರನ್ನು ಬಂಧಿಸಿದ್ದು, ಕಳ್ಳತನವಾದ ಎಲ್ಲಾ ವಸ್ತುಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಪೈಕಿ ಈರ್ವರು ಅದೇ ಕಾಲೇಜಿನ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ.

RELATED ARTICLES  ಕಾಗಾಲ ಚಿದಾನಂದ ಭಂಡಾರಿ ಅವರಿಗೆ ಮಾತೃವಿಯೋಗ.

ಡಿವೈಎಸ್ಪಿ ಶಿರಸಿ, ಪಿಐ ಶಿರಸಿ ಮಾರ್ಗದರ್ಶನದ ಮೇರೆಗೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪಿಎಸ್ಐ ದಯಾನಂದ ಜೋಗಳೇಕರ್, ಸಿಬ್ಬಂದಿಗಳಾದ ಗಣಪತಿ ನಾಯಕ್,‌ಮಹಾದೇವ ನಾಯಕ್, ಅರುಣ್ ಕುಮಾರ್ ಜಾವೇಸ್ ಶೇಕ್, ಶ್ರೀಧರ ನಾಯಕ್, ರಾವ್ ಸಾಹೇಬ್, ಮನೋಜ್ ಇವರಿಗೆ ಕಾಲೇಜಿನ ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES  ಹಿಂದು ಜನಜಾಗೃತಿ ಸಮಿತಿಯ ವತಿಯಿಂದ ಮನವಿ ಸಲ್ಲಿಕೆ