ಶಿರಸಿ : ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕೆ ಎಸ್ ಆರ್ ಟಿ ಸಿ ಬಸ್ಸ್ ರಸ್ತೆ ಪಕ್ಕದ ಗದ್ದೆಗೆ ಪಲ್ಟಿಯಾದ ಘಟನೆ ನಡೆದಿದೆ.ಈ ಘಟನೆಯಲ್ಲಿ ಚಾಲಕ ಸೇರಿ ಬಸ್’ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಕೆ ಎ 19,ಎಫ್ 3419 ನಂಬರನ ಬಸ್ಸು ಶಿರಸಿ ಕುಮಟಾ ಹೆದ್ದಾರಿಯಲ್ಲಿ, ಕುಮಟಾ ಕಡೆಯಿಂದ ಸಿರ್ಸಿ ಕಡೆಗೆ ಹೋಗುತ್ತಿರುವಾಗ ಸಿರ್ಸಿ ತಾಲೂಕಿನ ಹನುಮಂತಿ ಸಮೀಪದ ಹಾರುಗಾರ್ ಬಳಿ ಘಟನೆ ಸಂಭವಿಸಿದೆ.

RELATED ARTICLES  ಸರಕಾರಿ‌ ಶಾಲೆಯ ಶಿಕ್ಷಕಿ ನೇಣಿಗೆ ಶರಣು : ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ : ಸ್ಥಳಕ್ಕೆ ತೆರಳಿದ ಪೊಲೀಸರ ತಂಡ.

ಪಲ್ಟಿಯಾದ ರಭಸಕ್ಕೆ ಬಸ್’ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುಗಳನ್ನು ನಗರದ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES  ನಾಮಪತ್ರ ಸಲ್ಲಿಸದೆ ಶಾರದಾ ಶೆಟ್ಟಿಯವರಿಗೆ ಬೆಂಬಲ ಸೂಚಿಸಿದ ಶಿವಾನಂದ ಹೆಗಡೆ.