ಕುಮಟಾ: ರೈತನೊಬ್ಬ ಕೆಲಸ ಮುಗಿಸಿ ಮನೆಗೆ ಹೋಗುತ್ತಿರುವಾಗ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಮುರೂರಿನ ಮಡಕಿಬೈಲ್ ನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಮೂರೂರು ನಿವಾಸಿ ನಾಗರಾಜ್ ಗಾವಡಿ(31) ಎಂದು ಗುರುತಿಸಲಾಗಿದೆ.

RELATED ARTICLES  ಭಟ್ಕಳದ ಮಾರಿ ಜಾತ್ರೆಗೆ ಚಾಲನೆ : ವೈಭವದಿಂದ ನಡೆಯಲಿದೆ ಜಾತ್ರೆ

ಈತನು ರೈತಾಪಿ ಕೆಲಸ ಹಾಗೂ ಕರೆಂಟ್ ರಿಪೇರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ಮೂರೂರಿನ ನೆಲಬಾವಿಯಲ್ಲಿ ಕಾಲು ತೊಳೆಯಲು ಹೋದಾಗ ಜಾರಿ ಬಿದ್ದು ಸಾವನಪ್ಪಿದ್ದಾನೆ. ನಂತರ ಘಟನಾಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .ಕುಮಟಾ ಪೊಲೀಸ್ ಠಾಣೆಯಲ್ಲಿ ಈ ಕುರಿತಾಗಿ ಪ್ರಕರಣ ದಾಖಲಾಗಿದೆ.

RELATED ARTICLES  ಭೀಕರ ಅಪಘಾತ ಶಿರಸಿ‌ ಮೂಲದ ಈರ್ವರ ದುರ್ಮರಣ.