ಹೊನ್ನಾವರ : ಪ್ರಖ್ಯಾತ ಯಕ್ಷಗಾನ ಕಲಾವಿದರೊಂದಿಗೆ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡ ಹವ್ಯಾಸಿ ಯಕ್ಷಗಾನ ಕಲಾವಿದ ಹಾಗೂ ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸಿಕೊಡುವ ಮೂಲಕ ಯಕ್ಷಗಾನ ಗುರುವಾಗಿ ಗುರುತಿಸಿಕೊಂಡಿದ್ದ, ತಾಲೂಕಿನ ಹಳದೀಪುರದ ಸಂಕೊಳ್ಳಿಯ ರಾಮ ಚನ್ನಪ್ಪ ನಾಯ್ಕ (78) ವಯೋಸಹಜವಾಗಿ ತಮ್ಮ ಸ್ವಗೃಹದಲ್ಲಿ ದೈವಾಧೀನರಾದರು.

RELATED ARTICLES  ಕಾರವಾರ ನಗರಸಭೆಗೆ 5 ಕೋಟಿ ಮಂಜೂರು

ಮೃತರು ಮಡದಿ, ಪುತ್ರ ಹಾಗೂ ಕುಟುಂಬದವರನ್ನು ಅಗಲಿದ್ದಾರೆ. ಬೇರೆ ಬೇರೆ ಯಕ್ಷಗಾನ ಕಲಾತಂಡಗಳ ಜೊತೆಗೆ ನಿಕಟ ಸಂಬಂಧ ಹೊಂದಿದ್ದ ಅವರು. ಚಿಟ್ಟಣಿ, ಗೋಡೆ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದವರು.

ಯಕ್ಷಗಾನ ಮಂಡಳಿಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಹಾಗೂ ಮಂಡಳಿಯ ಸದಸ್ಯರಾಗಿ ಗುರುತಿಸಿಕೊಂಡು, ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಯಕ್ಷಗಾನ ಹೆಜ್ಜೆಗಳನ್ನು ಕಳಿಸಿ ಸಾರ್ಥಕ ಬದುಕು ಬದುಕಿದ್ದವರು. ಇವರ ಅಗಲುವಿಕೆಗೆ ಅವರ ಕುಟುಂಬದವರು, ಬಂಧುಗಳು, ಶಿಷ್ಯ ವರ್ಗ ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

RELATED ARTICLES  ಶಾರ್ಟ್ ಸರ್ಕ್ಯೂಟ್‌ನಿಂದ ಕುಮಟಾದ ಮನೆಯೊಂದರಲ್ಲಿ ಬೆಂಕಿ ಅವಘಡ.