ಭಟ್ಕಳ:  ಬೆಳಕೆ ಪಿನ್ನುಪಾಲ ರೈಲ್ವೆ ಹಳಿ ಸಮೀಪ ವ್ಯಕ್ತಿಯ ಮೃತ ದೇಹ ಅನುಮಾನಾಸ್ಪದವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಶೇಖರ ಮಂಜಯ್ಯ ನಾಯ್ಕ ಎಂದು ಗುರುತಿಸಲಾಗಿದೆ. ಈತ  ಆ. 5 ರ ರಾತ್ರಿ 11 ಗಂಟೆ ಸುಮಾರಿಗೆ ಹೋಟೆಲ್ ಗೆ ಕೆಲಸಕ್ಕೆ ಹೋದವನು ಊಟ ಹಾಗೂ ತೆಗೆದುಕೊಂಡು ಹೋದವನು ಮನೆಗೂ ಹೋಗದೆ ನಾಪತ್ತೆಯಾಗಿದ್ದ. ಇಂದು ಬೆಳಕೆ ಪಿನ್ನುಪಾಲ ರೈಲ್ವೆ ಹಳಿ ಪಕ್ಕದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಈತನ ಸಾವಿನ ಬಗ್ಗೆ ಸಂಶಯವಿರುವ ಕಾರಣ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತನ ಸಂಬಂಧಿ ವೆಂಕಟೇಶ ಮಂಜಯ್ಯ ನಾಯ್ಕ ದೂರು ನೀಡಿದ್ದು. ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಸಿ.ಪಿ.ಐ ಚಂದನ್ ಗೋಪಾಲ ಶವವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

RELATED ARTICLES  ಮನಸೂರೆಗೊಳಿಸುವ ಚಿತ್ರಗಳನ್ನು ಬಿಡಿಸುವ ಅಪ್ರತಿಮ ಚಿತ್ರ ಕಲಾವಿದ ಸಚಿನ್

ಮೃತನ ಸಾವಿನ ನಿಖರ ಕಾರಣ ಪೊಲೀಸ ತನಿಖೆಯಿಂದ ತಿಳಿದು ಬರಬೇಕಾಗಿದೆ.