ಕುಮಟಾ : ತಾಲೂಕಿನ ಕಾಗಾಲ್ ಅಂಗಡಿಕೇರಿಯಲ್ಲಿ ವ್ಯಕ್ತಿಯೊಬ್ಬ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ನಡೆದಿದೆ. ಕಾಗಲ್ ಅಂಗಡಿಕೇರಿಯ ನಿವಾಸಿ ಮಂಜುನಾಥ ಮಾಧವ ನಾಯ್ಕ (45) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಹೆತ್ತ ತಾಯಿ ತನ್ನಿಂದ ದೂರವಾಗಿ ಮನೆಯಲ್ಲಯೇ ಬೇರೆ ಕೋಣೆಯಲ್ಲಿ ವಾಸ್ತವ್ಯ ಇದ್ದುಕೊಂಡು, ಬೇರೆ ಅಡುಗೆ ಮಾಡಿಕೊಳ್ಳುತ್ತಿರುವ ವಿಚಾರವನ್ನೇ  ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ.

RELATED ARTICLES  ಭವಿಷ್ಯದಲ್ಲಿ ತೀವ್ರ ಬರಗಾಲ, ಕಾಡ್ಗಿಚ್ಚಿನ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ

ಆ. 6 ರಂದು ಮುಂಜಾನೆ ಮನೆಯಿಂದ ಪಂಚಾಯತಿಯ ಹತ್ತಿರ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಮರಳಿ ಬಾರದೇ, ಕಾಣೆಯಾಗಿದ್ದರು. ಆ.7 ರಂದು ಕಾಗಲ್ ಗ್ರಾಮ ಪಂಚಾಯಿತಿ ಸಮೀಪ ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿದ ಬೆಟ್ಟದ ಜಮೀನಿನಲ್ಲಿ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

RELATED ARTICLES  ರಸ್ತೆ ದಾಟುತ್ತಿದ್ದವನಿಗೆ ಬಡಿದ ಬೋಲೇರೋ ಪಿಕ್ ಅಪ್ ವಾಹನ : ಸ್ಪಾಟ್ ಡೆತ್.

ಮಂಜುನಾಥ ಅವರ ಪತ್ನಿ ಲಕ್ಷ್ಮೀ ಮಂಜುನಾಥ ನಾಯ್ಕ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಪ್ರಕ್ರಿಯೆ ಕೈಗೊಂಡರು.