ಕುಮಟಾ : ಕುತೂಹಲ ಕೆರಳಿಸಿದ್ದ ತಾಲೂಕಿನ ದೀವಗಿ ಗ್ರಾಮ ಪಂಚಾಯತದ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಯುವ ಮುಖಂಡ ಹಾಗೂ ಉದ್ಯಮಿ ಜಗದೀಶ ಭಟ್ಟ( ಜಗ್ಗು) ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಫ್ರಾಂಕಿ ಅವರ ವಿರುದ್ಧ ಜಗದೀಶ ಸುರೇಶ ಭಟ್ಟ ಗೆಲುವು ಸಾಧಿಸಿದ್ದಾರೆ.
ಉದ್ಯಮಿಯಾಗಿ, ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜಗ್ಗು ಸಾಮಾಜಿಕವಾಗಿಯೂ ಜನಸಂಪರ್ಕ ಹೊಂದಿರುವವರು.
ತಾನು ತನ್ನ ಗ್ರಾಮಪಂಚಾಯತದಲ್ಲಿ ಪ್ರಾಮಾಣಿಕ ಜನಸೇವೆಗೆ ಮುಂದಾಗಿರುವ ಜಗದೀಶ ಭಟ್ಟ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಹೆಚ್ಚಿನ ಬಲ ಪಡೆದುಕೊಂಡಿದ್ದಾರೆ. ತಾನು ಅಧ್ಯಕ್ಷನಾಗಿ ಆಯ್ಕೆಯಾಗಲು ಸಹಕರಿಸಿದ ಸಾರ್ವಜನಿಕರು, ಗ್ರಾ.ಪಂ ಸದಸ್ಯರು ಹಾಗೂ ಕ್ಷೇತ್ರದ ಶಾಸಕ ದಿನಕರ ಶೆಟ್ಟಿಯವರಿಗೆ ಹಾಗೂ ಬಿಜೆಪಿ ಮುಖಂಡರು ಮತ್ತು ಪದಾಧಿಕಾರಿಗಳಿಗೆ ಜಗ್ಗು ಭಟ್ಟ ಧನ್ಯವಾದ ಸಮರ್ಪಿಸಿದ್ದಾರೆ.
ಜಗದೀಶ ಭಟ್ಟ ಆಯ್ಕೆಯ ಸಂದರ್ಭದಲ್ಲಿ ದೀವಗಿ ಗ್ರಾಮ ಪಂಚಾಯತ್ ಗೆ ಬಿಜೆಪಿ ಮುಖಂಡರಾದ ಎಂ.ಜಿ ಭಟ್ಟ, ಮಂಡಲಾಧ್ಯಕ್ಷ ಹೇಮಂತ್ ಗಾಂವ್ಕರ್, ಕುಮಾರ್ ಮಾರ್ಕಾಂಡೆ, ಶಶಾಂಕ ಶಾಸ್ತ್ರಿ ಇತರರು ಭೇಟಿನೀಡಿ ನೂತನ ಅಧ್ಯಕ್ಷರನ್ನು ಅಭಿನಂದಿಸಿದ್ದಾರೆ.