ಕುಮಟಾ: ಅ. ೧೩, ರವಿವಾರ ಬೆ. ೮.೩೦ ರಿಂದ ಚಿತ್ರಿಗಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿತ್ರಿಗಿ ಸ್ಟೂಡೆಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಉಚಿತ ಆಯುರ್ವೇದ ಸಂವಾದ ಮತ್ತು ಔಷಧ ವಿತರಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಯುರ್ವೇದ ತಜ್ಞರಾದ ಡಾ. ಎಂ. ಎಸ್. ಅವಧಾನಿ, ಡಾ. ಗಿರೀಶ್ ನಾಯ್ಕ, ಡಾ. ರಾಘವೇಂದ್ರ ನಾಯ್ಕ, ಡಾ. ವಾಹಿನಿ ಆರ್. ನಾಯ್ಕ, ಡಾ. ಎಸ್. ಪ್ರಸನ್ನ, ಡಾ. ಸಹನಾ ಹೆಗಡೆ ಸಂವಾದ ಹಾಗೂ ತಪಾಸಣೆ ನಡೆಸಿಕೊಡಲಿದ್ದಾರೆಂದು, ಶಿಬಿರದ ಗೌರವಾಧ್ಯಕ್ಷರಾದ ಸುರೇಶ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಪ್ರವೇಶ ಪಡೆಯಲು ೯೬೨೦೮೫೪೭೭೯, ೯೪೪೮೭೨೩೦೫೨, ೯೯೬೪೧೯೭೩೧೯ ಸಂಪರ್ಕಿಸಬಹುದಾಗಿದೆ.

RELATED ARTICLES  ಒಎನ್'ಜಿಸಿಯಲ್ಲಿ ನೇಮಕಾತಿ.