ಶಿರಸಿ: ದೇಶದ ಎಲ್ಲ ಮಹಿಳೆ, ಮಕ್ಕಳು ಸೇರಿದಂತೆ ಎಲ್ಲ ಜನತೆಯ ನಡುವೆ ಸಮತ್ವ ಬರಬೇಕು ಎಂಬುದು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕಾಯ್ದೆಯ ಉದ್ಧೇಶವಾಗಿದೆ ಎಂದು ಧಾರವಾಡ ಉಚ್ಛನ್ಯಾಯಾಲಯದ ನ್ಯಾಯವಾದಿ ಅನೂಪ ದೇಶಪಾಂಡೆ ಹೇಳಿದರು.

ಅವರು ಶಿರಸಿ ನಗರದ ಪಂಡಿತ್ ದೀನ ದಯಾಳ ಸಭಾಭವನದಲ್ಲಿ ಪಂ. ದೀನ ದಯಾಳ ಟ್ರಸ್ಟ್ ವತಿಯಿಂದ ನಡೆದ ಏಕರೂಪ ನಾಗರಿಕ ಸಂಹಿತೆ ಕುರಿತು ನಡೆದ ಸಂವಾದದಲ್ಲಿ ಮಾತನಾಡಿದರು. ದೇಶದಲ್ಲಿ ಸಮಸ್ತ ಜನತೆಯ ನಡುವೆ ಕ್ರಿಮಿನಲ್ ವಿಷಯದಲ್ಲಿ ಈಗಾಗಲೇ ಸಮಾನ ಕಾಯ್ದೆ ಜಾರಿಯಲ್ಲಿದೆ. ಆದತರ ಪರ್ಸನಲ್ ಲಾ / ಪ್ಯಾಮಿಲಿ ಲಾ ವಿಷಯದಲ್ಲಿ ಸಮಾನ ಕಾನೂನು ಬರಬೇಕು ಎಂಬುದು ಈ ಕಾನೂನಿನ ಉದ್ಧೇಶವಾಗಿದೆ ಎಂದರು.

ಹಿಂದೂ ಸಮಾಜ ಬದಲಾವಣೆಗೆ ಯಾವತ್ತೂ ಮುಕ್ತವಾಗಿದೆ. ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳಲು ಹಿಂದೂ ಸಮಾಜ ಬಯಸುತ್ತದೆ. ಹಿಂದೂ ಕೋಡ್ ಬಿಲ್ ತಂದಾಗ ಹಿಂದುಗಳ ಅಭಿಪ್ರಾಯವನ್ನು ಯಾರೂ ಕೇಳಿರಲಿಲ್ಲ. ಕಾನೂನು ಜಾರಿ ತರಲು ಅಧಿಕಾರದಲ್ಲಿರುವ ಸರಕಾರಕ್ಕೆ ಪೊಲಿಟಿಕಲ್ ಕರೇಜ್ ಅನಿವಾರ್ಯವಾಗಿದೆ. ಪ್ರಸ್ತುತ ಅಧಿಕಾರದಲ್ಲಿರುವ ಸರಕಾರ ಧೈರ್ಯ ಹೊಂದಿದೆ ಎಂಬ ವಿಶ್ವಾಸ ತನ್ನದು ಎಂದು ಅವರು ಹೇಳಿದರು.

RELATED ARTICLES  ಹೆಗಡೆ ಕೋಲ್ಡ್‌ಡ್ರಿಂಕ್ಸ್‌ನ ಮಾಲಿಕ ಶ್ರೀಕಾಂತ ವಾಸುದೇವ ಹೆಗಡೆ ನಿಧನ

ಕಾರ್ಯಕ್ರಮದಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ನಿಕಟಪೂರ್ವ ಸಹಾಯಕ ಸಾಲಿಸಿಟರ್ ಜನರಲ್ ಅರುಣ ಜೋಷಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್ ಸೇರಿದಂತೆ ಅನೇಕ ಹಿರಿಯರು ಏಕರೂಪ ನಾಗರಿಕ ಸಂಹಿತೆ ಪರವಾಗಿದ್ದರು. ಆರಂಭದಲ್ಲಿ ಜವಾಹರಲಾಲ್ ನೆಹರೂ ಸಹ ಈ ಕಾನೂನಿನ ಪರವಾಗಿದ್ದು, ನಂತರದಲ್ಲಿ ರಾಜಕೀಯ ಕಾರಣಕ್ಕೆ ಅಭಿಪ್ರಾಯ ಬದಲಾಯಿಸಿದರು ಎನ್ನುತ್ತಾರೆ.

ಹಿಂದೂ ಸಮಾಜದಲ್ಲಿ ಬಹು ಪತ್ನಿತ್ವ ಜಾರಿಯಲ್ಲಿದ್ದರೂ ಸಹ ದೇಶ ಒಂದಾಗಬೇಕು ಎಂಬ ಕಾರಣಕ್ಕೆ ಹಿಂದೂ ಕೋಡ್ ಬಿಲ್ ನ್ನು ಸ್ವಾಗತಿಸಿದೆ. ಏಕರೂಪ ನಾಗರಿಕ ಸಂಹಿತೆ ತರುವ ಮೂಲಕ ಎಲ್ಲ ನಾಗರಿಕರಿಗೆ ಸದೃಢ ಭಾರತ, ಬಲಿಷ್ಠ ಸಮಾಜವನ್ನು ನಿರ್ಮಿಸುವ ಹೊಣೆ ನಮ್ಮ ಮೇಲಿದೆ.

RELATED ARTICLES  ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆ : ಶೈಕ್ಷಣಿಕ ಕಾಳಜಿ ಬೆಳೆಸಿಕೊಳ್ಳಲು ಶಾಸಕರ ಕರೆ.

ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಪ್ರಜಾಪ್ರಭುತ್ವ ರೂಪಿತವಾಗಿರುವುದೇ ಚರ್ಚೆ, ಸಂವಾದದ ಮೇಲೆ ಆಗಿದೆ. ದೇಶದ ಜವಾಬ್ದಾರಿ ನಾಗರಿಕರಾಗಿ ಏಕರೂಪ ನಾಗರಿಕ ಸಂಹಿತೆಯ ಕುರಿತಾಗಿ ಚರ್ಚೆ ನಡೆಯಬೇಕಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಅರಕಾರ ಆರ್ಟಿಕಲ್ 370 ರದ್ದು ಪಡಿಸುವ ಮೂಲಕ ಐತಿಹಾಸಿಕ ಬದಲಾವಣೆ ತಂದಿದೆ. ಕೇಂದ್ರ ಸರಕಾರಕ್ಕೆ ಬೆಂಬಲ ನೀಡುವ ಮೂಲಕ ದೇಶ ಮೊದಲು ಎಂಬ ವಿಚಾರ ನಮ್ಮದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಶಿರಸಿ ನಗರದ ವಿವಿಧ ರಂಗದ ಗಣ್ಯರು, ವಿಚಾರವಂತರು, ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.